About the Author

ಪತ್ರಕರ್ತ ಮತ್ತು ಬರಹಗಾರರೂ ಆಗಿರುವ ಸುಗತ ಶ್ರೀನಿವಾಸರಾಜು ಅವರು ಕನ್ನಡದ ಪ್ರಸಿದ್ಧ ಪ್ರತಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ಕನ್ನಡಪ್ರಭ’ ದಿನಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ‘ಏಷ್ಯಾನೆಟ್ ನ್ಯೂಸ್’ ನೆಟ್ ವರ್ಕ್ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಸುಗತ ಅವರು ಅದಕ್ಕೂ ಮೊದಲು ‘ವಿಜಯ ಕರ್ನಾಟಕ’ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಮತ್ತು ‘ಔಟ್ ಲುಕ್’ ರಾಷ್ಟ್ರೀಯ ವಾರಪತ್ರಿಕೆಯ ದಕ್ಷಿಣ ಭಾರತದ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಇದಕ್ಕೂ ಮೊದಲು ‘ಹಿಂದೂಸ್ತಾನ್ ಟೈಮ್ಸ್’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಅಮೆರಿಕದ ಪ್ರತಿಷ್ಠಿತ ಆ್ಯಸ್ಪೆನ್ ಇನ್ಸ್ಟಿಟ್ಯೂಟ್ ನ ಫೆಲೋ ಕೂಡಾ ಆಗಿದ್ದರು.

ಭಾರತದ ಇಂಗ್ಲಿಷ್ ಪತ್ರಿಕಾ ಜಗತ್ತಿನಲ್ಲಿ ಉತ್ತಮ ಪತ್ರಕರ್ತರೆಂದು ಹೆಸರಾಗಿರುವ ಸುಗತ ಶ್ರೀನಿವಾಸರಾಜು, ಏಕಮುಖತೆಯ ಭೀತಿಯಲ್ಲಿದ್ದ ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ರೀತಿಯ ಆಯಾಮ ನೀಡಿದವರು. ಪತ್ರಿಕಾ ವೃತ್ತಿಯಲ್ಲಿನ ಅವರ ಅಪಾರ ಅನುಭವ, ತಿಳಿವಳಿಕೆ, ಆಲೋಚನೆ, ವೃತ್ತಿ ಕೌಶಲ್ಯ ಕನ್ನಡ ಪತ್ರಿಕೋದ್ಯಮಕ್ಕೆ ಹೊಸತನ ನೀಡಿತ್ತು. ಈ ಹೊಸತನಕ್ಕೆ ಕಾರಣವಾದ ಅವರ ಆಲೋಚನೆಗಳು, ದೃಷ್ಠಿಕೋನ, ವಾದ ಸರಣಿ, ವಿಶ್ಲೇಷಣೆಯ ಸೂಕ್ಷ್ಮ ವಿಧಾನವನ್ನು ಸಹಜವಾಗಿಯೇ ಅವರ ಬರಹಗಳಲ್ಲೂ ಕಾಣಬಹುದು. ಸಮಕಾಲೀನವಾದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಅವುಗಳ ಎಲ್ಲ ಆಯಾಮಗಳೊಂದಿಗೆ ಅವರು ಕಟ್ಟಿಕೊಡುವ ರೀತಿ ಅನನ್ಯ.

ಸುಗತ ಶ್ರೀನಿವಾಸರಾಜು

(25 Nov 1971)

Awards