
ಜೆರೆಮಿ ಸೀಬ್ರೂಕ್ ಬ್ರಿಟನ್ ನ ಪ್ರಖ್ಯಾತ ಚಿಂತಕ, ಬರಹಗಾರ ಮತ್ತು ಅಂಕಣಕಾರ, ನಲವತ್ತಕ್ಕೂ ಹೆಚ್ಚು ಪುಸ್ತಕ ರಚಿಸಿರುವ ಇವರು ಭಾರತ ಮತ್ತು ಬಾಂಗ್ಲಾದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳು, ಪರಿಸರ, ಅಭಿವೃದ್ಧಿ ಸಂಕಥನಗಳು, ಆರ್ಥಿಕ ನೀತಿ ಮತ್ತು ಬಡತನ ಕುರಿತಂತೆ ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅಭಿವೃದ್ಧಿಯ ಆಗು-ಹೋಗು ಜಾಗತೀಕರಣದ ಆಳ- ಹರಿವು, ಮನುಷ್ಯನ ಆಶೆ-ಹತಾಶೆ ಕುರಿತಾದ ಲೇಖನಗಳ ಕನ್ನಡಾನುವಾದ ಈ ಕೃತಿ. ಪರ್ತಕರ್ತರಾದ ಸುಗತ ಶ್ರೀನಿವಾಸರಾಜು ಮತ್ತು ರೋಸ್ಹಿ ಡಿ.ಸೋಜಾ ಅವರು ಈ ಲೇಖನಗಳನ್ನು ಕನ್ನಡೀಕರಿಸಿ ಸಂಪಾದಿಸಿದ್ದಾರೆ.
ಈ ಕೃತಿಗೆ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರು ಬೆನ್ನುಡಿ ಬರೆದಿದ್ದಾರೆ. ‘ಮನುಷ್ಯನ ಸ್ವಾವಲಂಬನೆ, ಘನತೆ, ಸಮಾನತೆಗಳ ಹೃದಯ ಬಡಿತದಂತೆ ಇರುವ ಈ ಪುಟ್ಟ-ಪುಟ್ಟ ಲೇಖನಗಳ ಪುಸ್ತಿಕೆಯು ನಮ್ಮೊಡನೆ ಇದ್ದರೆ ನಾವೊಂದು ಒಳಗಣ್ಣು ಪಡೆದಂತೆ’ ಎನ್ನುತ್ತಾರೆ ದೇವನೂರು ಮಹಾದೇವ.
©2025 Book Brahma Private Limited.