About the Author

ಪ್ರೊ. ಸೂಗಯ್ಯ ಹಿರೇಮಠ ಅವರು 09-05-1950ರಂದು ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಸಿಂಗನಹಳ್ಳಿಯಲ್ಲಿ ಜನಿಸಿದರು. ತಂದೆ ಶರಣಯ್ಯ ಹಿರೇಮಠ, ತಾಯಿ ಶಾಂತಮ್ಮ ಹಿರೇಮಠ. ಶರಣ ಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕನ್ನಡ ಜಾನಪದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 

ಕರ್ನಾಟಕ ವಿದ್ಯಾಲಯ ಹಾಗೂ ಗುಲಬರ್ಗಾ ಯು.ಜಿ.ಸಿ. ಅಡಿಯಲ್ಲಿ ಉತ್ತರ ಕರ್ನಾಟಕದ ಜನಪದ ಸಾಹಿತ್ಯ, ಸಂಗ್ರಹ ಮಾಡಿದ್ದಾರೆ. ಜನಪದ ವೈದ್ಯಕೋಶ ಗುಲಬರ್ಗಾ ಜಿಲ್ಲೆಯ ಸಂಗ್ರಹ ಮಾಡಿರುವ ಇವರು ವೃತ್ತಿಯಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಶ್ರೀಮತಿ ಚನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯ, ಚಿಂಚೋಳಿ, ಗುಲಬರ್ಗಾ ಜಿಲ್ಲೆ ಕನ್ನಡ ವಿಭಾಗದ ಮುಖ್ಯಸ್ಥರು. ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯ, ಬೀದರ -  ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಪುಸ್ತಕಗಳ ಪರಿಶೀಲನೆ ಕಾರ್ಯ ಹಾಗೂ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸೂಗಯ್ಯ ಅವರ ಪ್ರಕಟಿತ ಕೃತಿಗಳು ಉಂಡು ಮಲಗಿದವರು (ಕಾವ್ಯ). ನಿಜಗುಣಾರ್ಯ ವಿರಚಿತ ಪಂಚಾಂಗ (ಸಂಪಾದನೆ), ಹುಮನಾಬಾದ, ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು (ವಿಮರ್ಶೆ), ಅಂತರ (ಕಥಾ ಸಂಕಲನ), ನೀರುಣಿಲೆ (ಕಾವ್ಯ.). ಉರಿಲಿಂಗಪೆದ್ದಿ (ಜೀವನಚರಿತ್ರೆ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ ಸಾಹಿತ್ಯ ಕ್ಷೇತ್ರದ ಸೇವೆಗಾಗಿ ರಾಜ್ಯೋತ್ಸವ  ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಲಭಿಸಿವೆ.

ಸೂಗಯ್ಯ ಹಿರೇಮಠ

(09 May 1950-21 Nov 2017)