
‘ರಂಜೇರಿನ ಸಿಂಧರು’ ಕನ್ನಡ ಸಾಹಿತ್ಯಕ್ಕೆ ಐತಿಹಾಸಿಕವಾಗಿ ಅವರು ನೀಡಿರುವ ಕೊಡುಗೆಗಳ ಕುರಿತು ವಿಶ್ಲೇಷಿಸಿದ ಕೃತಿ. ಲೇಖಕ ಸೂಗಯ್ಯ ಹಿರೇಮಠ ಅವರು ರಚಿಸಿದ್ದಾರೆ. ಸಿಂಧರು ಯಾರು, ಎಂಬುದು ಗೊತ್ತಿಲ್ಲದ ಸಾಹಿತಿಗಳಿಗೆ, ಸಂಶೋಧಕರಿಗೆ ಮತ್ತು ಚರಿತ್ರೆಕಾರರಿಗೆ ಲೇಖಕರು ಒಂದು ಹೊಸ ಹಾದಿಯನ್ನೇ ತೆರೆದಿಟ್ಟಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಚರಿತ್ರೆಯನ್ನು ಕಟ್ಟುವುದಲ್ಲಿ ಸಾಮಂತರಾಗಿದ್ದುಕೊಂಡು ಸಿಂಧರು ನೀಡಿದ ಕೊಡುಗೆ ಈವರೆಗೆ ಚರಿತ್ರೆ ಗುರುತಿಸಿಲ್ಲ. ಈ ಕೆಲಸವನ್ನು ಲೇಖಕರು ಮಾಡಿದ್ದಾರೆ. ಸಿಂದರ ಸಂಪೂರ್ಣ ಇತಿಹಾಸ ಸಂಶೋಧನೆಗೆ ಈ ಕೃತಿ ಪ್ರೇರಣೆ ನೀಡುತ್ತದೆ.
©2025 Book Brahma Private Limited.