About the Author

ಲೇಖಕ ಸುಂಕಂ ಗೋವರ್ಧನ ಮೂಲತಃ ಬೆಂಗಳೂರಿನವರು. ಮೈಸೂರಿನ ಕ.ರಾ.ಮು. ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಬಿ.ಎಂ.ಶ್ರೀ ಪ್ರತಿಷ್ಟಾನದಿಂದ ಹಸ್ತಪ್ರತಿ ಶಾಸ್ತ್ರ ಹಾಗೂ ಕನ್ನಡ ಭಾಷಾಶಾಸ್ತ್ರ ತರಗತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನ ಶಾಸ್ತ್ರ ಡಿಪ್ಲೊಮಾ ಪದವೀಧರರು. 
 ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ ಮತ್ತು ವಾಸ್ತುಶಿಲ್ಪ ಇವರ ಆಸಕ್ತಿಯ ಕ್ಷೇತ್ರಗಳು. ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆಯ ಇತಿಹಾಸ ಮತ್ತು ಪುರಾತತ್ವ ಸಮಾವೇಶ, ವಿಜಯನಗರ ಅಧ್ಯಯನಗಳು, ಕರ್ನಾಟಕ ಇತಿಹಾಸ ಅಕಾಡೆಮಿಯ ವಾರ್ಷಿಕ ವಿದ್ವತ್ ಸಭೆಗಳು, ಬಿ.ಎಂ.ಶ್ರೀ ಪ್ರತಿಷ್ಟಾನದ ಹಸ್ತಪ್ರತಿ ಸಮಾವೇಶ ಸೇರಿದಂತೆ ಇತರೆಡೆ ಸುಮಾರು 30ಕ್ಕೂ ಹೆಚ್ಚಿನ ಬಂಧಗಳನ್ನು ಮಂಡಿಸಿದ್ದಾರೆ. ಸಾಹಿತ್ಯಕ ಪತ್ರಿಕೆ, ಅಭಿನಂದನಾ ಗ್ರಂಥಗಳು ಹಾಗೂ ಇತಿಹಾಸ ದರ್ಪಣ ಇತ್ಯಾದಿ ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. 

ಸ್ಪರ್ಧಾಚೈತ್ರ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಪ್ರಸ್ತುತ ತುಮಕೂರಿನ ಡಾ. ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದಲ್ಲಿ “ಕರ್ನಾಟಕ ಶಾಸನಾಧ್ಯಯನಗಳ ತಾತ್ವಿಕ ವಾಗ್ವಾದಗಳು-ಒಂದು ವಿಮರ್ಶಾತ್ಮಕ ಅಧ್ಯಯನ” ವಿಷಯವಾಗಿ ಸಂಶೋಧನ ನಡೆಸುತ್ತಿದ್ದಾರೆ. ಸದ್ಯ, ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ಸಿಲಿಕಾನ್ ಸಿಟಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.  ಯುವಕರಿಗಾಗಿ ಓದು-ಬರಹ ಬಳಗ ಎಂಬ ಸಾಂಸ್ಕೃತಿಕ ವೇದಿಕೆ ನಡೆಸುತ್ತಿದ್ದಾರೆ. 

ಕೃತಿಗಳು: ಕಾವೇರಿ ನದಿ ತಲಕಾವೇರಿಯಿಂದ ಪೂಂಪುಹಾರದವರೆಗೆ, ಕನ್ನಡ ನಾಡಿನ ಪ್ರಮುಖ ಕೋಟೆಗಳು, ಕಲಾಗುರು ಆರ್. ಎಂ. ಹಡಪದ್ ಮತ್ತು ಸಂಪಾದಿತ ಕೃತಿಗಳು; ಹಸ್ತಪ್ರತಿ ಅಧ್ಯಯನ ಸಂಪುಟ- 1 (2012), ಹಸ್ತಪ್ರತಿ ಅಧ್ಯಯನ ಸಂಪುಟ-2 (2013), ಕೈದಾಳ {ಡಾ.ಕೆ.ಆರ್. ಗಣೇಶ್ ಅಭಿನಂದನಾ ಗ್ರಂಥ} (2012), ಕರ್ನಾಟಕ ಜೈನ ಶಾಸನಗಳು ಸಂ 1, 2, 3 (2018),
 

ಸುಂಕಂ ಗೋವರ್ಧನ