ನೊಳಂಬ ದೇವಾಲಯಗಳು

Author : ಸುಂಕಂ ಗೋವರ್ಧನ

Pages 277

₹ 500.00
Year of Publication: 2020
Published by: ಗುರು ಸಿದ್ದರಾಮೇಶ್ವರ ಸೇನೆ
Address: ಶ್ರೀ ಸಿದ್ದರಾಮೇಶ್ವರ ಸಮುದಾಯ ಭವನ ಹೇರೂರು, ಗುಬ್ಬಿ, ತುಮಕೂರು-572216
Phone: 9535762464

Synopsys

ನೊಳಂಬರ ಕಾಲದ ದೇವಾಲಯಗಳ ಬಗ್ಗೆ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿದ  ಸಂಶೋಧನಾ ಕೃತಿ-ನೊಳಂಬ ದೇವಾಲಯಗಳು. ಈ ದೇವಾಲಯಗಳ ಕೇಂದ್ರ ಪ್ರದೇಶವಾದ ಹೇಮಾವತಿ ಮಾತ್ರವಲ್ಲದೇ,  ನಂದಿ, ಅರಳಗುಪ್ಪೆ, ಆವನಿ, ಧರ್ಮಪುರಿ ಮುಂತಾದ ಪ್ರದೇಶ ವ್ಯಾಪ್ತಿಯ  ದೇವಾಲಯಗಳ ಚಾರಿತ್ರಿಕ ಹಿನ್ನೆಲೆಯನ್ನು ಸಹ ಸವಿವರವಾಗಿ ಲೇಖಕರು ಚರ್ಚಿಸಿದ್ದಾರೆ.

About the Author

ಸುಂಕಂ ಗೋವರ್ಧನ

ಸುಂಕಂ ಗೋವರ್ಧನ ಒಬ್ಬ ಉತ್ಸಾಹಿ ಯುವ ಬರಹಗಾರ. ಸೃಜನಶೀಲ ಸಾಹಿತ್ಯವಿರಲಿ, ಸೃಜನೇತರ ಸಾಹಿತ್ಯವಿರಲಿ ವಿಶೇಷ ಆಸಕ್ತಿಯಿಂದ ಅಧ್ಯಯನ ಮಾಡುವವರು. ಕೇವಲ ಸಾಹಿತ್ಯ ಮಾತ್ರವಲ್ಲದೇ, ಚಿತ್ರಕಲೆ, ಇತಿಹಾಸ, ಸಿನೆಮಾ, ಸಂಗೀತ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಬದುಕಿನೊಡನೆ ಒಡನಾಟ ಇಟ್ಟುಕೊಂಡಿರುವವರು.  ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. - 50 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಇವರು  'ಕನ್ನಡ ನಾಡಿನ ಪ್ರಮುಖ ಕೋಟೆಗಳು' ಹಾಗೂ 'ಕಾವೇರಿ ನದಿ' ಪುಸ್ತಕಗಳನ್ನು ಹೊರತಂದಿದ್ದಾರೆ.  ಓದು-ಬರಹ ಬಳಗ ಎಂಬ ಸಾಂಸ್ಕೃತಿಕ ವೇದಿಕೆಯೊಂದನ್ನು ರೂಪಿಸಿ ಉತ್ಸಾಹಿ ಯುವಕರ ಪಡೆ ಕಟ್ಟಿದ್ದಾರೆ.  ಪ್ರಸ್ತುತ ಸ್ಪರ್ಧಾಚೈತ್ರ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books