About the Author

ಸ್ವಾಮಿ ಆದಿ ದೇವಾನಂದರು-ಇವರ ಪೂರ್ವ ಜನ್ಮದ ಹೆಸರು-ವೆಂಕಟಪತಿ. ತಂದೆ (ಜನನ: 1912) ಮದ್ರಾಸಿನ ರಾಮಕೃಷ್ಣ ಮಠದಲ್ಲಿ ಅಧ್ಯಾತ್ಮಕಿ ಸೇವೆ.  ಶ್ರೀರಾಮಕೃಷ್ಣರ ನೇರ ಶಿಷ್ಯರು. ಸ್ವಾಮಿ ವಿರಜಾನಂದ ಅವರಿಂದ ಸನ್ಯಾಸ ದೀಕ್ಷೆ ಪಡೆದರು. ವಾರಣಾಸಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ನಂತರ ವಿಶಾಖ ಪಟ್ಟಣದಲ್ಲಿ ಸೇವೆ ಸಲ್ಲಿಸಿದರು. ಮದ್ರಾಸಿನ ಮಠದ ವ್ಯವಸ್ಥಾಪಕರಾಗಿದ್ದರು. 1970 ರಲ್ಲಿ ಬೆಂಗಳೂರಿನ ಬಸವನಗುಡಿಯ ಮಠದ ಅಧ್ಯಕ್ಷರಾದರು.

ಕೃತಿಗಳು: ಭಗವದ್ಗೀತೆ, ಹನ್ನೊಂದು ಉಪನಿಷತ್ತುಗಳು,  ಉಪನಿಷತ್ತುಗಳ ಸಾರ ಸಂಗ್ರಹ, ಬ್ರಹ್ಮಸೂತ್ರಗಳು, ಪತಂಜಲಿ ಯೋಗದರ್ಶನ , ಶ್ರೀ ಲಲಿತಾ ಸಹಸ್ರನಾಮ, ಶ್ರೀ ಲಲಿತಾ ತ್ರಿಶತಿ ಸ್ತೋತ್ರ, ಶಮಕರರ ವಿವೇಕ ಚೂಡಾಮಣಿ, ವಿದ್ಯಾರಣ್ಯರ ಪಂಚದಶಿ. ಆಂಗ್ಲ ಕೃತಿಗಳು: ರಾಮಾನುಜ ಭಾಷ್ಯಾಸಹಿತ ಬ್ರಹ್ಮಸೂತ್ರಗಳು, ರಾಮಾನುಜ ಭಾಷ್ಯಾಸಹಿತ ಭಗವದ್ಗೀತೆ, ಯತೀಂದ್ರ ಮತ ದೀಪಿಕಾ, ಯಮುನಾಚಾರ್ಯರ  ಸ್ತೋತ್ರರತ್ನ. ಡಿವಿಜಿ ಅ ವರ "ಜೀವನ ಧರ್ಮಯೋಗ" ಭಗವದ್ಗೀತೆಯ ಭಾಷ್ಯದ ಪೀಠಿಕೆಯಲ್ಲಿ ಆಧಾರಗ್ರಂಥವನ್ನಾಗಿ ಉಲ್ಲೇಖಿಸಿದ 2 ಕೃತಿಗಳಲ್ಲಿ ಆದಿದೇವಾನಂದರ ಭಗವದ್ಗೀತೆಯೂ ಒಂದು.  1983ರ ಜೂನ್ 14 ರಂದು ನಿಧನರಾದರು. 

ಸ್ವಾಮಿ ಆದಿದೇವಾನಂದ