About the Author

ಲೇಖಕ ಟಿ.ಆರ್. ರಾಧಾಕೃಷ್ಣ ಅವರು 1940ರಲ್ಲಿ ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ಜನಿಸಿದರು. ತಂದೆ-ಟಿ.ರಂಗಯ್ಯ, ತಾಯಿ- ಶೇಷಮ್ಮ. ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಉಡುಪಿಗಳಲ್ಲಿ ತಮ್ಮ ಶಿಕ್ಷಣ ಮುಂದುವರೆಸಿ ಬಿಎ, ಬಿ.ಎಲ್. ಮತ್ತು ಬಿ.ಇಡಿ ಪದವಿಯನ್ನು ಪಡೆದರು. ಆನಂತರದಲ್ಲಿ ಸಂತ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾದರು. 2009ರಲ್ಲಿ ನಿಧನರಾದರು. 

1968 ರಲ್ಲೇ ಮೊರೆ-ಮೊರೆತ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಬಲವಾಗಿ ಬೇರೂರಿದ್ದು ಸಣ್ಣ ಕಥಾ ಕ್ಷೇತ್ರದಲ್ಲಿ ಇವರ ಕಥೆಗಳೆಲ್ಲಾ ಚಿತ್ರದುರ್ಗದ ಪರಿಸರದಲ್ಲೇ ಅರಳಿವೆ. ಇದುವರೆಗೆ ಉತ್ಖನನ, ಕಟ್ಟುಪಾಡುಗಳು, ಮೋಕ್ಷಪಕ್ಷಿಯ ಆತ್ಮ, ಇರುಳು ಕಾಣಿಸಿದ ಆಕಾಶ, ಎಂಬ ನಾಲ್ಕು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ನಿಂತು ನೋಡುವೆ ಅವುಗಳತ್ತಲೇ ಮತ್ತು ಮಿಂಚಿ ಮರೆಯಾಗುವ ಮೀನುಗಳು ಎಂಬ ಇವರ ಪ್ರಬಂಧ ಸಂಕಲನಗಳು ಕೊಂಚ ಹೊಸ ಹಾದಿಯಲ್ಲಿ ಸಾಗಿವೆ ಎನ್ನಬಹುದು. ಚಿತ್ರದುರ್ಗದ ಗರಡಿ ಮನೆಗಳ ಸಾಂಸ್ಕೃತಿಕ ಲೋಕವನ್ನು ಪರಿಚಯಿಸುವ ನಿಟ್ಟಿನಲ್ಲಿ ಪೈ. ವಸಂತರಾವ್ ನೆನಪುಗಳು ಎಂಬ ಆತ್ಮಕಥನವನ್ನು ಕುಸ್ತಿಲೋಕದ ಧ್ರುವತಾರೆ ಪೈ ನಂಜಪ್ಪ ಎಂಬ ಜೀವನ ಚರಿತ್ರೆಯನ್ನು ರಚಿಸಿದ್ದಾರೆ.

ಟಿ.ಆರ್. ರಾಧಾಕೃಷ್ಣ