ಟಿ.ಆರ್. ರಾಧಾಕೃಷ್ಣರ ಎಲ್ಲಾ ಕತೆಗಳು

Author : ಟಿ.ಆರ್. ರಾಧಾಕೃಷ್ಣ

Pages 456

₹ 250.00




Year of Publication: 2009
Published by: ಮಾತಾ ಪ್ರಿಂಟರ್ಸ್
Address: ನಂ. 1535/10, ವಾಣಿ ವಿಲಾಸ ರಸ್ತೆ, ಅಗ್ರಹಾರ, ಕೆ.ಆರ್. ಮೊಹಲ್ಲಾ, ಮೈಸೂರು- 570024

Synopsys

‘ಟಿ.ಆರ್. ರಾಧಾಕೃಷ್ಣರ ಎಲ್ಲಾ ಕತೆಗಳು’ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಂಡ ಎಲ್ಲ ಲೇಖಕರ ಹಾದಿಯೂ ಇದೇ. ಸಾಫಲ್ಯದ ಸ್ತರಗಳು ಮಾತ್ರ ಅವರವರ ಪ್ರಾಪ್ತಿಯನ್ನು ಅನುಸರಿಸುತ್ತವೆ. ರಾಧಾಕೃಷ್ಣರ ಬಗ್ಗೆ ಮೊದಲು ಹೇಳಬೇಕಾದ ಮಾತೆಂದರೆ, ಅವರು ಸಾಹಿತ್ಯವನ್ನು, ಅತ್ಯಂತ ಗಂಭೀರವಾದ ಒಂದು ಮನಸ್ಸಿನ ವ್ಯಾಪಾರವೆಂದು ಗ್ರಹಿಸಿ, ಆ ಪ್ರಕ್ರಿಯೆಯಲ್ಲಿ ತಮಗೆ ಎಷ್ಟು ಸಾಧ್ಯವೋ ಅಷ್ಟನ್ನೂ ಸಾದಿಸಬೇಕೆಂದು ಶ್ರದ್ಧೆ ಮತ್ತು ಜವಾಬ್ದಾರಿಯಿಂದ ಹೆಣಗಾಡುವ ಲೇಖಕರಾಗಿದ್ದಾರೆ. ತಾವು ಕಂಡದ್ದು-ಉಂಡದ್ದು, ತಮ್ಮ ಸುತ್ತಲ ಪರಿಸರ, ಹೀಗೆ ತಮ್ಮ ಅನುಭವದ ಕಕ್ಷೆಗೆ ಬಂದ ಅಸಂಗತ-ಅಸಂಬದ್ಧ ಸಂಗತಿಗಳೆಲ್ಲವನ್ನೂ ತಮ್ಮೆದುರು ಹರಡಿಕೊಂಡು ಅವುಗಳ ನಡುವೆ ಇರಬಹುದಾದ ಆಂತರಿಕ ಸಂಬಂಧದ ಎಳೆಗಳನ್ನೋ ಅಥವಾ ಅವುಗಳ ವೈದ್ಯಶ್ಯವೇ ಎತ್ತಿಕೊಡಬಹುದಾದ ಅರ್ಥವನ್ನೋ, ಕಣ್ಣಲ್ಲಿ ಕಣ್ಣಿಟ್ಟು ಏಕಾಗ್ರಚಿತ್ತದಿಂದ ತಲೆಗೆ ಕೈ ಇಟ್ಟು ಯಾವುದೇ ವ್ಯಗ್ರತೆಗೆ ಒಳಗಾಗದೇ ಧ್ಯಾನದ ನೆಲೆಯಲ್ಲಿ ಹುಡುಕುವ ಕ್ರಿಯಾ ಪ್ರವೃತ್ತಿಯನ್ನು ಅವರಲ್ಲಿ ನೋಡುತ್ತೇವೆ. ರಾಧಾಕೃಷ್ಣರ ಹೆಚ್ಚಿನ ಕತೆಗಳು ಹೀಗೆ ಧ್ಯಾನದ ನೆಲೆಯಲ್ಲೇ ಹುಟ್ಟುವ ಕತೆಗಳಾಗಿವೆ.

About the Author

ಟಿ.ಆರ್. ರಾಧಾಕೃಷ್ಣ

ಲೇಖಕ ಟಿ.ಆರ್. ರಾಧಾಕೃಷ್ಣ ಅವರು 1940ರಲ್ಲಿ ಇತಿಹಾಸ ಪ್ರಸಿದ್ಧ ಚಿತ್ರದುರ್ಗದಲ್ಲಿ ಜನಿಸಿದರು. ತಂದೆ-ಟಿ.ರಂಗಯ್ಯ, ತಾಯಿ- ಶೇಷಮ್ಮ. ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಉಡುಪಿಗಳಲ್ಲಿ ತಮ್ಮ ಶಿಕ್ಷಣ ಮುಂದುವರೆಸಿ ಬಿಎ, ಬಿ.ಎಲ್. ಮತ್ತು ಬಿ.ಇಡಿ ಪದವಿಯನ್ನು ಪಡೆದರು. ಆನಂತರದಲ್ಲಿ ಸಂತ ಜೋಸೆಫ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 1998ರಲ್ಲಿ ನಿವೃತ್ತರಾದರು. 2009ರಲ್ಲಿ ನಿಧನರಾದರು.  1968 ರಲ್ಲೇ ಮೊರೆ-ಮೊರೆತ ಎಂಬ ಕವನ ಸಂಕಲನ ಪ್ರಕಟಿಸಿದ ಇವರು ಬಲವಾಗಿ ಬೇರೂರಿದ್ದು ಸಣ್ಣ ಕಥಾ ಕ್ಷೇತ್ರದಲ್ಲಿ ಇವರ ಕಥೆಗಳೆಲ್ಲಾ ಚಿತ್ರದುರ್ಗದ ಪರಿಸರದಲ್ಲೇ ಅರಳಿವೆ. ಇದುವರೆಗೆ ಉತ್ಖನನ, ಕಟ್ಟುಪಾಡುಗಳು, ಮೋಕ್ಷಪಕ್ಷಿಯ ಆತ್ಮ, ಇರುಳು ಕಾಣಿಸಿದ ...

READ MORE

Related Books