About the Author

ಉಪನ್ಯಾಸಕಿ, ಲೇಖಕಿ, ಚಿಂತಕಿ, ಅನುವಾದಕಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತೊಡಗಿಕೊಂಡವರು ತೇಜಸ್ವಿನಿ ನಿರಂಜನ. ರಾಷ್ಟ್ರಿಯ, ಅಂತರರಾಷ್ಟ್ರಿಯ ಮಟ್ಟದಲ್ಲಿ ಹೆಸರು ಗಳಿಸಿರುವ ಅವರು ಕನ್ನಡದ ಶ್ರೀಸಾಮಾನ್ಯ ಓದುಗರಿಗೆ ತಲುಪಿದ್ದು ಕಡಿಮೆಯೆ. ತಮ್ಮ ಅನುವಾದದ ಮೂಲಕ ಕನ್ನಡದ ಲೇಖಕರನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಿದವರು ತೇಜಸ್ವಿನಿಯವರು. ಮರಳಿ ಬರುವೆ (ಪ್ಯಾಬ್ಲೊನೆರೂದ ಕವಿತೆಗಳು), ಎಪ್ಪತೈದು ಪೋಲಿಶ್ ಕವಿತೆಗಳು, ಜೂಲಿಯಸ್ ಸೀಸರ್, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (ಸಂಪಾದನೆ) ೧೯೯೪, ಫಣಿಯಮ್ಮ(ಕಾದಂಬರಿ)ಗಳನ್ನು ಅನುವಾದಿಸಿದ್ಧಾರೆ. ಕಾಮನ್‌ವೆಲ್ತ್ ಪೊಯೆಟ್ರಿ ಕಮೆಂಡೇಶನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ ಅವರಿಗೆ. 

ತೇಜಸ್ವಿನಿ ನಿರಂಜನ

(26 Jul 1958)