ಸ್ತ್ರೀವಾದಿ ಸಾಹಿತ್ಯ ವಿಮರ್ಶೆ

Author : ತೇಜಸ್ವಿನಿ ನಿರಂಜನ

Pages 292

₹ 250.00




Year of Publication: 2014
Published by: ಅಭಿನವ ಪ್ರಕಾಶನ
Address: # 17, 18 - 2, 1ನೇ ಮುಖ್ಯರಸ್ತೆ, ಪಿಎಫ್ ಬಡಾವಣೆ, ವಿಜಯನಗರ, ಬೆಂಗಳೂರು-560040
Phone: 09448804905

Synopsys

ಲೇಖಕಿಯರಾದ ತೇಜಸ್ವಿನಿ ನಿರಂಜನ ಹಾಗೂ ಸೀಮಂತಿನಿ ನಿರಂಜನ ಅವರು ಜಂಟಿಯಾಗಿ ಸಂಪಾದಿಸಿದ ಲೇಖನಗಳ ಕೃತಿ-ಸ್ತ್ರೀವಾದಿ ಸಾಹಿತ್ಯ ವಿಮರ್ಶೆ. ಸಂಸ್ಕೃತಿ, ಇತಿಹಾಸ, ರಾಜಕಾರಣ, ಭಾರತೀಯ ಸಂದರ್ಭ-ಈ ಎಲ್ಲ ವಲಯಗಳಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಒಳಗೊಂಡ ಲೇಖನಗಳಿವೆ. ಸಾಹಿತ್ಯ, ಸಂಸ್ಕೃತಿ, ನಡೆದು ಬಂದ ದಾರಿಯ ಇತಿಹಾಸ, ರಾಜಕಾರಣದ ಸ್ವರೂಪ-ಸ್ವಭಾವಗಳನ್ನು ವಿಶ್ಲೇಷಿಸಲಾಗಿದೆ. ಭಾರತೀಯ ಸಂದರ್ಭದ ಹಿನ್ನೆಲೆಯಲ್ಲಿ ಈ ವಿಚಾರಗಳು ಪ್ರತಿಪಾದನೆಗೊಂಡಿದ್ದರಿಂದ, ಭಾರತದ ಸಂಸ್ಕೃತಿ-ಇತಿಹಾಸ, ರಾಜಕಾರಣದ ಮೇಲೂ ಬೆಳಕು ಚೆಲ್ಲುತ್ತವೆ.

About the Author

ತೇಜಸ್ವಿನಿ ನಿರಂಜನ
(26 July 1958)

ಉಪನ್ಯಾಸಕಿ, ಲೇಖಕಿ, ಚಿಂತಕಿ, ಅನುವಾದಕಿ ಹೀಗೆ ಹತ್ತು ಹಲವು ಕ್ಷೇತ್ರದಲ್ಲಿ ತೊಡಗಿಕೊಂಡವರು ತೇಜಸ್ವಿನಿ ನಿರಂಜನ. ರಾಷ್ಟ್ರಿಯ, ಅಂತರರಾಷ್ಟ್ರಿಯ ಮಟ್ಟದಲ್ಲಿ ಹೆಸರು ಗಳಿಸಿರುವ ಅವರು ಕನ್ನಡದ ಶ್ರೀಸಾಮಾನ್ಯ ಓದುಗರಿಗೆ ತಲುಪಿದ್ದು ಕಡಿಮೆಯೆ. ತಮ್ಮ ಅನುವಾದದ ಮೂಲಕ ಕನ್ನಡದ ಲೇಖಕರನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸಿದವರು ತೇಜಸ್ವಿನಿಯವರು. ಮರಳಿ ಬರುವೆ (ಪ್ಯಾಬ್ಲೊನೆರೂದ ಕವಿತೆಗಳು), ಎಪ್ಪತೈದು ಪೋಲಿಶ್ ಕವಿತೆಗಳು, ಜೂಲಿಯಸ್ ಸೀಸರ್, ಸ್ತ್ರೀವಾದಿ ಸಾಹಿತ್ಯ ವಿಮರ್ಶೆ (ಸಂಪಾದನೆ) ೧೯೯೪, ಫಣಿಯಮ್ಮ(ಕಾದಂಬರಿ)ಗಳನ್ನು ಅನುವಾದಿಸಿದ್ಧಾರೆ. ಕಾಮನ್‌ವೆಲ್ತ್ ಪೊಯೆಟ್ರಿ ಕಮೆಂಡೇಶನ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದೆ ಅವರಿಗೆ.  ...

READ MORE

Related Books