About the Author

ಯು. ಎಸ್. ವೆಂಕಟರಾಮನ್ ಅವರು ಮಾಸ್ಕೋದಲ್ಲಿನ ಟ್ರೇಡ್ ಯೂನಿಯನ್ ಕಾಲೇಜಿ ನಲ್ಲಿ ವ್ಯಾಸಂಗ ಮಾಡಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಯನ್ನೂ ಪಡೆದಿದ್ದಾರೆ. ಎಂ.ಟಿ.ವಿ. ಆಚಾರ್ಯರ ಬಳಿ ಕಲಾಶಿಕ್ಷಣ ಪಡೆದಿದ್ದಾರೆ. ಇವರು ಮುಖ್ಯವಾಗಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿದಿದ್ದರೂ ಅದರೊಂದಿಗೆ ಕಲಾಕ್ಷೇತ್ರದಲ್ಲೂ ದುಡಿದಿದ್ದಾರೆ. ಆಗಾಗ ಲೇಖನಗಳನ್ನೂ ಬರೆದಿರುವ ಶ್ರೀಯುತರು ಕಲಾ ಸಂಘಟನೆಗಳಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಲ್ಲೊಬ್ಬರಾಗಿರುವ ಇವರು ಮಧುಗಿರಿ ರಾಮು ಅವರನ್ನು ಹತ್ತಿರದಿಂದ ಬಲ್ಲವರು.

ಯು.ಎಸ್. ವೆಂಕಟರಾಮನ್