ಪರಿಶ್ರಮ

Author : ಯು.ಎಸ್. ವೆಂಕಟರಾಮನ್

Pages 456

₹ 250.00




Year of Publication: 2009
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ವೆಂಕಟರಾಮ್ ಅವರು ಅಪ್ಪಟ ಸಮಾಜವಾದಿ. ನಡೆ ನುಡಿಯಲ್ಲಿ ಅಂತರವಿಲ್ಲದ ವ್ಯಕ್ತಿತ್ವ. ದುಡಿವವರ, ದಲಿತರ, ಬಡವರ ಬಗೆಗೆ ಅವರು ಹೊಂದಿದ್ದ ಕಾಳಜಿ ಪ್ರಶ್ನಾತೀತ. ಸಮಾಜದ ಅಪಮಾನಿತರು ಮತ್ತು ಕಡೆಗಣಿಸಲ್ಪಟ್ಟ ಜನರ ಜಾಗೃತಿಗಾಗಿ ಅವರು ಜೀವನ ಪರ್ಯಂತ ದುಡಿದವರು. ಹೋರಾಟಗಾರರೂ ಆಗಿದ್ದ ಅವರಲ್ಲಿ ಒಬ್ಬ ಸ್ಥಿತಪ್ರಜ್ಞನೂ ಇದ್ದ ಎನ್ನುತ್ತಾರೆ ಖ್ಯಾತ ಲೇಖಕ, ಸಾಹಿತಿ ಡಾ.ಸಿದ್ದಲಿಂಗಯ್ಯ. 

ವೆಂಕಟರಾಮ್ ಅವರ ಅಧ್ಯಯನದ ವ್ಯಾಪ್ತಿ ದೊಡ್ಡದು. ಅವರು ಯಾವುದೇ ವಿಚಾರವನ್ನು ಸಮಯೋಚಿತ ದೃಷ್ಟಿಯಿಂದ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರು. ತಮ್ಮ ಲೌಕಿಕ ಪರಿಜ್ಞಾನವನ್ನು ಸಮಾಜದ ಹಿತಕ್ಕಾಗಿ ಬಳಸಿದ ಅಪೂರ್ವ ವ್ಯಕ್ತಿ. ಅವರು ಒಬ್ಬ ಅತ್ಯುತ್ತಮ ಲೇಖಕರಾಗಿದ್ದರು ಎನ್ನುವುದಕ್ಕೆ ಅವರ ಬದುಕು ಮತ್ತು ಚಿಂತನೆ ಸ್ಪೂರ್ತಿಯಾಗಿವೆ. ಪರಿಶ್ರಮ ವೆಂಕಟರಾಮ್ ಅವರ ಅತ್ಯುತ್ತಮ ಕೃತಿಯಾಗಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ವೆಂಕಟರಾಮ್ ಅವರು ವಿಷಯಗಳನ್ನು ನೋಡುವ ಕ್ರಮ, ಅವರ ಬುದ್ಧಿ ಮತ್ತು ಅವರಿಗಿದ್ದ ಮಾನವೀಯತೆಯ ಗಾಢ ಅರಿವಿನ ಬಗ್ಗೆ ”ಪರಿಶ್ರಮ’  ಕೃತಿ ಒಳನೋಟ ಒದಗಿಸುತ್ತದೆ.   

About the Author

ಯು.ಎಸ್. ವೆಂಕಟರಾಮನ್

ಯು. ಎಸ್. ವೆಂಕಟರಾಮನ್ ಅವರು ಮಾಸ್ಕೋದಲ್ಲಿನ ಟ್ರೇಡ್ ಯೂನಿಯನ್ ಕಾಲೇಜಿ ನಲ್ಲಿ ವ್ಯಾಸಂಗ ಮಾಡಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಯನ್ನೂ ಪಡೆದಿದ್ದಾರೆ. ಎಂ.ಟಿ.ವಿ. ಆಚಾರ್ಯರ ಬಳಿ ಕಲಾಶಿಕ್ಷಣ ಪಡೆದಿದ್ದಾರೆ. ಇವರು ಮುಖ್ಯವಾಗಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿದಿದ್ದರೂ ಅದರೊಂದಿಗೆ ಕಲಾಕ್ಷೇತ್ರದಲ್ಲೂ ದುಡಿದಿದ್ದಾರೆ. ಆಗಾಗ ಲೇಖನಗಳನ್ನೂ ಬರೆದಿರುವ ಶ್ರೀಯುತರು ಕಲಾ ಸಂಘಟನೆಗಳಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಲ್ಲೊಬ್ಬರಾಗಿರುವ ಇವರು ಮಧುಗಿರಿ ರಾಮು ಅವರನ್ನು ಹತ್ತಿರದಿಂದ ಬಲ್ಲವರು. ...

READ MORE

Related Books