ಮಧುಗಿರಿ ರಾಮು

Author : ಯು.ಎಸ್. ವೆಂಕಟರಾಮನ್

Pages 16

₹ 10.00




Year of Publication: 1997
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಕಲಾ ಸಂಘಟನಾಕಾರ,  ಲೇಖಕ ಯು. ಎಸ್. ವೆಂಕಟರಾಮನ್ ಅವರು ಬರೆದಿರುವ ’ ಮಧುಗಿರಿ ರಾಮು’ ಪುಸ್ತಕವು ಕರ್ನಾಟಕ ಲಲಿತಕಲಾ ಅಕಾಡೆಮಿಯ ಯೋಜನೆಗಳಲ್ಲಿ ಒಂದಾದ ರಾಜ್ಯದ ಹಿರಿಯ ಕಲಾವಿದರು ಮತ್ತು ಅವರ ಕೃತಿಗಳ ಬಗ್ಗೆ ಪರಿಚಯಿಸಿದ ಪ್ರಕಟಣೆಯಲ್ಲಿ ಒಂದಾಗಿದೆ.

ಸಂಗೀತ, ನಾಟಕ ಮೊದಲಾದ ಲಲಿತ ಕಲೆಗಳಲ್ಲಿ ಹವ್ಯಾಸಿಯಾಗಿ ತೊಡಗಿದರೂ, ನಂತರ ಕಲಾಭ್ಯಾಸ ಮಾಡಿ ಚಿತ್ರಕಲೆಯಲ್ಲಿ ಪರಿಣಿತರಾದ ಬಹುಮುಖ ಪ್ರತಿಭೆಯ ಕಲಾವಿದರು ಶ್ರೀ. ಎಂ.ಎಚ್. ರಾಮು ಅಥವಾ ಮಧುಗಿರಿ ರಾಮು ಅವರು.  ಇವರು ತಮ್ಮ ಸ್ವಂತ ಸಾಧನೆ, ಸಾಮರ್ಥ್ಯ ಮತ್ತು ಆತ್ಮೀಯರ ಬೆಂಬಲದಿಂದ ಅಪಾರ ಕೀರ್ತಿಗಳಿಸಿ ಕರ್ನಾಟಕದ ಹೆಮ್ಮೆಯ ಕಲಾವಿದರೆನಿಸಿದ್ದಾರೆ.

ಇವರ ಕಲಾತ್ಮಕ ಜೀವನದ  ಹೆಜ್ಜೆ ಗುರುತುಗಳನ್ನು , ಜೀವನ ಸಾಧನೆಯನ್ನು ಈ ಪುಸ್ತಕದಲ್ಲಿ ಪರಿಚಯಿಸಲಾಗಿದೆ.

 

About the Author

ಯು.ಎಸ್. ವೆಂಕಟರಾಮನ್

ಯು. ಎಸ್. ವೆಂಕಟರಾಮನ್ ಅವರು ಮಾಸ್ಕೋದಲ್ಲಿನ ಟ್ರೇಡ್ ಯೂನಿಯನ್ ಕಾಲೇಜಿ ನಲ್ಲಿ ವ್ಯಾಸಂಗ ಮಾಡಿದ್ದಾರಲ್ಲದೆ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಯನ್ನೂ ಪಡೆದಿದ್ದಾರೆ. ಎಂ.ಟಿ.ವಿ. ಆಚಾರ್ಯರ ಬಳಿ ಕಲಾಶಿಕ್ಷಣ ಪಡೆದಿದ್ದಾರೆ. ಇವರು ಮುಖ್ಯವಾಗಿ ಕಾರ್ಮಿಕ ಕ್ಷೇತ್ರದಲ್ಲಿ ದುಡಿದಿದ್ದರೂ ಅದರೊಂದಿಗೆ ಕಲಾಕ್ಷೇತ್ರದಲ್ಲೂ ದುಡಿದಿದ್ದಾರೆ. ಆಗಾಗ ಲೇಖನಗಳನ್ನೂ ಬರೆದಿರುವ ಶ್ರೀಯುತರು ಕಲಾ ಸಂಘಟನೆಗಳಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಲ್ಲೊಬ್ಬರಾಗಿರುವ ಇವರು ಮಧುಗಿರಿ ರಾಮು ಅವರನ್ನು ಹತ್ತಿರದಿಂದ ಬಲ್ಲವರು. ...

READ MORE

Related Books