About the Author

ಹಿರಿಯ ಅನುವಾದಕ ವಿ.ಕೃಷ್ಣ ಅವರು 1950ರಲ್ಲಿ ಜನಿಸಿದರು. ಬಿ.ಕಾಂ. ಪದವೀಧರರು. ಹಲವಾರು ಸಂಸ್ಥೆಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಕನ್ನಡ ಹಾಗೂ ಭಾಷಾವಿಜ್ಞಾನದಲ್ಲಿ ಆಸಕ್ತಿವುಳ್ಳವರು. ತಮ್ಮ 35 ವರ್ಷಗಳ ಅಧ್ಯಯನದ ಫಲವಾಗಿ ಮೂರು ಸಂಪುಟಗಳಲ್ಲಿ 4750 ಪುಟಗಳಲ್ಲಿ ಹರಡಿಕೊಂಡಿರುವ 1.60.000 ಪದಗಳ ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ರೂಪಿಸಿದ್ದಾರೆ. ಇದು ಅಪರೂಪದ ಸಾಹಸಗಾಥೆ. ಕನಕದಾಸರ ಕೀರ್ತನೆಗಳ ‘ಶಬ್ಧಪ್ರಯೋಗಕೋಶ’ವನ್ನೂ ಪ್ರಕಟಿಸಿದ್ದಾರೆ. ಸಂಗೀತಶಾಸ್ತ್ರ, ಸಸ್ಯಶಾಸ್ತ್ರ, ಕಲೆ, ವಿಜ್ಞಾನ ಕ್ಷೇತ್ರದಲ್ಲೂ ಸಾಹಿತ್ಯ ಕೃಷಿ ಮಾಡಿದ್ದು, ಕುವೆಂಪು ಭಾಷಾಭಾರತಿಗಾಗಿ ಹಲವಾರು ಪುಸ್ತಕಗಳು, ಲೇಖನಗಳ ಅನುವಾದ, ಕಾಪಿ ಎಡಿಟಿಂಗ್ ಗಳನ್ನು ಸಹ ಮಾಡಿದ್ದಾರೆ. ಡಾ. ಅಂಬೇಡ್ಕರ್ ಸರಣಿ ಬರೆಹಗಳು, ದೀನದಯಾಳ್ ಉಪಾಧ್ಯಾಯ ಅವರ ಸರಣಿ ಪುಸ್ತಕಗಳು, ವಿಲ್ ಡ್ಯುರಾಂಡ್ ಅವರ ಸಂಸ್ಕೃತಿಯ ಕತೆ (The Story of Civilization)ಗಳ ಅನುವಾದ ಕಾರ್ಯದಲ್ಲಿ ಇವರ ಪಾತ್ರ ಪ್ರಮುಖ. ಸೀತಾರಾಮ್ ಗೋಯಲ್ ಸಂಪಾದಿತ ಅಭಿವ್ಯಕ್ತಿ ಸ್ವಾತಂತ್ರ್ಯ(Freedom of Expression), ರಾಜೀವ್ ಮಲ್ಹೋತ್ರ ಅವರ ಸಂಸ್ಕೃತಕ್ಕಾಗಿ ಹೋರಾಟ (The Battle of Sanskrit) ಹಾಗೂ ಇಂದ್ರಜಾಲ (Indra’s Net) ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

ವಿ. ಕೃಷ್ಣ