ಇಂದ್ರಜಾಲ

Author : ವೀರಭದ್ರಪ್ಪ ಬಿಸ್ಲಳ್ಳಿ

Pages 148

₹ 150.00
Year of Publication: 2020
Published by: ವಿಸ್ಮಯ ಬುಕ್ ಹೌಸ್
Address: ವಿಸ್ಮಯ ಬುಕ್ ಹೌಸ್, #1542, ಮೊದಲನೇ ಮಹಡಿ, ಸಿ&ಡಿ ಬ್ಲಾಕ್, ಅನಿಕೇತನ ರಸ್ತೆ, ಕುವೆಂಪುನಗರ ಮೈಸೂರು.
Phone: 9448338956

Synopsys

ಲೇಖಕ ವೀರಭದ್ರಪ್ಪ ಬಿಸ್ಲಳ್ಳಿ ಅವರ ’ಇಂದ್ರಜಾಲ’ ಕಾದಂಬರಿ ಅವರ ಉಪಶೀರ್ಷಿಕೆಯೇ ಹೇಳುವಂತೆ ಒಂದು ಹತ್ಯೆಯ ಸುತ್ತ ಹೆಣೆಯಲಾಗಿರುವ ಕಥಾನಕ. ಈ ಕೃತಿಗೆ ಮುನ್ನುಡಿ ಬರೆದಿರುವ ಗುರುಪ್ರಸಾದ್ ಐಪಿಎಸ್ ಅವರು, ಇಲ್ಲಿ ಕತೆ ಜೈಲಿನಲ್ಲಿ ಆರಂಭವಾಗುತ್ತದೆ ಮತ್ತು ಅಲ್ಲೇ ಅಂತ್ಯವಾಗುತ್ತದೆ. ಬಾರ್ ನಲ್ಲಿ ಕುಡುಕನೊಬ್ಬ ಆಡಿದ ಮಾತುಗಳಿಂದ ಇಂತಹ ಅತ್ಯಂತ ಗಹನವಾದ ಪ್ರಕರಣ ಪಡೆದುಕೊಳ್ಳುವ ತಿರುವುಗಳು ರೋಚಕ. ಬಾರ್ ನಲ್ಲಿ ಕುಡುಕನ ಆ ಮಾತು ಕೇಳಿಸಿಕೊಂಡ ಪೊಲೀಸ್ ಕಾನ್ಸ್ ಟೇಬಲ್ ತಕ್ಷಣ ತೆಗೆದುಕೊಳ್ಳುವ ತೀರ್ಮಾನ ರಾಷ್ಟ್ರಮಟ್ಟದಲ್ಲಿ ಎಂಥ ಸಂಚಲನ ಸೃಷ್ಟಿಸುತ್ತದೆ ಎನ್ನುವುದೇ ಈ ಕಥೆಯ ಜೀವತಂತುವಾಗಿದೆ. ಮುಂಬೈ ಪೊಲೀಸ್ ಕಮಿಷನರ್ ಮತ್ತವರ ಸಹೋದ್ಯೋಗಿಗಳ ಕಾರ್ಯವೈಖರಿಯನ್ನು ಬಹಳ ಸಹಜವಾಗಿ ಮತ್ತು ಅಷ್ಟೇ ಸೊಗಸಾಗಿ ಚಿತ್ರಿಸಲಾಗಿದೆ. ಮುಚ್ಚಿ ಹೋಯಿತು ಎನ್ನುವ ಹಂತದಲ್ಲಿದ್ದ ಕೊಲೆ ಪ್ರಕರಣವೊಂದರ ಸುಳಿವು ಸಿಕ್ಕಾಗ ಉನ್ನತ ಪೊಲೀಸ್ ಅಧಿಕಾರಿ ಹೇಗೆ ಕಾರ್ಯಪ್ರವೃತ್ತರಾದರು ಎನ್ನುವುದನ್ನು ಕಮಿಷನರ್ ಪಾತ್ರದ ಮೂಲಕ  ಬಹಳ ನಾಜೂಕಾಗಿ ವಿವರಿಸಿ ಕುತೂಹಲವನ್ನು ಕೊನೆಯವರೆಗೂ ಬಿಗಿದಿಟ್ಟುಕೊಂಡಿರುವುದು ಬರಹಗಾರರ ನೈಪುಣ್ಯತೆಗೆ ಸಾಕ್ಷಿ. ಓದುತ್ತಿದ್ದಾಗ ಪಾತ್ರಧಾರಿಗಳು ನಮ್ಮ ಕಣ್ಣ ಮುಂದೆಯೇ ಸಾಗುತ್ತಿದ್ದಾರೆ ಎನ್ನುವ ಭಾವನೆ ಉಂಟಾಗುತ್ತದೆ. ನೈಜ ಘಟನೆಯ ಬಗ್ಗೆ ನಮಗೆ ತಿಳಿದಿದ್ದರೂ ಮತ್ತೆ ಅದನ್ನು ತಿಳಿಯಬೇಕೆನ್ನುವ ಕುತೂಹಲ ಮೂಡುವಂತೆ ಲೇಖಕರು ವಿವರಿಸಿದ್ದಾರೆ. ಶೀಮಾ – ರೋಹನ್ ಇಬ್ಬರೂ ಪೆರು ಮತ್ತು ಬೊಲಿವಿಯಾ ದೇಶಗಳಲ್ಲಿ ಪ್ರವಾಸ ಮಾಡಿದ ಪ್ರಸಂಗವು ಲೇಖಕರು ಒಬ್ಬ ಪ್ರವಾಸ ಕಥನಕಾರರೂ ಆಗಿರುತ್ತಾರೆ ಎನ್ನುವುದನ್ನು ಎತ್ತಿ ತೋರಿಸಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ವೀರಭದ್ರಪ್ಪ ಬಿಸ್ಲಳ್ಳಿ

ವೀರಭದ್ರಪ್ಪ ಬಿಸ್ಲಳ್ಳಿ ಅವರು ಓದುವಾಗಲೇ ವಾರಪತ್ರಿಕೆಯಲ್ಲಿ ಅರೆಕಾಲಿಕ ವರದಿಗಾದರನಾಗಿ ಪತ್ರಿಕೋದ್ಯಮ ವೃತ್ತಿ ಆರಂಭಿಸಿದವರು. ನಂತರ ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ ಪೂರ್ಣಾವಧಿ ವರದಿಗಾರನಾಗಿ ವೃತ್ತಿ ಜೀವನ ಆರಂಭಿಸಿದರು. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕ,ಹಿರಿಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿ, ರಾಜ್ಯಧರ್ಮ ಕನ್ನಡ ದಿನಪತ್ರಿಕೆಯ ಬೆಂಗಳೂರು, ಮೈಸೂರು ಆವೃತ್ತಿಗಳ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.  ...

READ MORE

Related Books