About the Author

ಲೇಖಕಿ ವಂದನಾ ಪಿ.ಸಿ ಅವರು ಹುಟ್ಟಿದ್ದು ದಾವಣಗೆರೆ, ಬಾಲ್ಯ ಕಳೆದದ್ದು, ಬೆಳದದ್ದು ಮತ್ತು ವಿದ್ಯಾಭ್ಯಾಸ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ. ದಾವಣಗೆರೆಯ ಬಿ.ಡಿ.ಟಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದು, ಕೆಲಸಕ್ಕಾಗಿ ಬೆಂಗಳೂರಿಗೆ ಬಂದರು. ಐ.ಟಿ.ಐ ನಲ್ಲಿ ವೃತ್ತಿ ಆರಂಭಿಸಿದ ಅವರು ಸಾಫ್ಟ್ ವೇರ್ ಆಗಿ ಮುಂದುವರೆದರು. ಎಚ್.ಪಿ. (ಹ್ಯೂಲೆಟ್ ಪ್ಯಾಕರ್ಡ್)ನಲ್ಲಿ ಹತ್ತೊಂಭತ್ತು ವರ್ಷಗಳ ಕಾಲ ಕೆಲಸ ಮಾಡಿ. ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ, 2012ರಲ್ಲಿ ಸ್ವಯಂ ನಿವೃತ್ತಿ ಪಡೆದರು.. ಕೆಲವು ಲೇಖನಗಳು ಈ ಮೊದಲು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸುಬ್ರೊತೊ ಬಾಗ್ಚಿ ಅವರ ಕೃತಿಯನ್ನು 'ಜಗವ ಚುಂಬಿಸು' ಎಂಬ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಸದ್ಯ ಕುಟುಂಬದೊಂದಿಗೆ ಅಮೇರಿಕಾದಲ್ಲಿ ವಾಸವಿದ್ದಾರೆ. 

ವಂದನಾ ಪಿ.ಸಿ