
ಮೈಂಡ್ ಟ್ರೀ ಕಂಪನಿಯ ಸಹ ಸಂಸ್ಥಾಪಕ, ಲೇಖಕರೂ ಆದ ಸುಬ್ರಾತೊ ಬಾಗ್ಚಿ ಅವರ ’ಗೋ ಕಿಸ್ ದಿ ವಲ್ಡ್’ ಕೃತಿಯ ಕನ್ನಡ ಅನುವಾದವನ್ನು ವಂದನಾ ಪಿ.ಸಿ ಅವರು ’ ಜಗವ ಚುಂಬಿಸು’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ.
ಲೇಖಕರ ಬಾಲ್ಯದಿಂದ ಹಿಡಿದು ವೃತ್ತಿ ಜೀವನದ ವಿವಿಧ ಆಯಾಮಗಳನ್ನು ನಿರೂಪಿಸುತ್ತಾ ಸಾಗುವ ಕೃತಿಯಿದು. ಹಲವು ಕುತೂಹಲಕಾರಿ ಮತ್ತು ಸಾಹಸಭರಿತ ಕತೆಗಳನ್ನು, ಅನುಭವ ಕಲಿಸಿದ ಪಾಠಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದನ್ನು ಸರಳವಾಗಿ ನಿರೂಪಿಸುತ್ತಾ ಸಾಗುತ್ತಾರೆ. ತಮ್ಮ ತಪ್ಪು ಒಪ್ಪುಗಳ ಪ್ರಾಮಾಣಿಕ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಮತ್ತು ಬಹು ಸೂಕ್ಷ್ಮವಾಗಿ ಮನಸ್ಸು ಮತ್ತು ಬುದ್ದಗಳೆರಡನ್ನೂ ವಿಚಾರ ಮಾಡಬಹುದಾದ ಸಂಗತಿಗಳನ್ನು ಬಿತ್ತರಿಸಿದ್ದಾರೆ.
©2025 Book Brahma Private Limited.