About the Author

ಡಾ. ವೆಂಕಟೇಶ್ವರ ಕೆ ಕೊಲ್ಲಿ ಅವರು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗಂಗಾರಾವಲಪಲ್ಲಿಯವರು. (ಜನನ: 31ನೇ ಜುಲೈ 1986)  ತಾಯಿ ಹುಲಿಗೆಮ್ಮ, ತಂದೆ ಕಾಶಪ್ಪ. ಪ್ರಾಥಮಿಕ ವಿದ್ಯಾಭ್ಯಾಸ ಸ್ವಂತ ಊರಲ್ಲಿ ಮುಗಿಸಿ ಪ್ರೌಢ ಶಿಕ್ಷಣ ಪಕ್ಕದ ಕಾನಾಗಡ್ಡದಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಗುರುಮಠಕಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದರು. ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರರು. ‘ದಲಿತ ಚಳವಳಿ ಮತ್ತು ಸಾಹಿತ್ಯಕ್ಕೆ ದಲಿತೇತರರ ಕೊಡುಗೆ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಗುಲಬರ್ಗಾ ವಿ.ವಿ .ಯಿಂದ ಪಿ.ಎಚ್. ಡಿ ಪಡೆದಿದ್ದಾರೆ. 

ಕೃತಿಗಳು: ನೆಲ ಮೂಲ ಚಿಂತನೆ (ವಿಮರ್ಶಾ ಲೇಖನಗಳು), ಬಿಸಿಲ ಬೀದಿಯ ಪಯಣ,  ಚಿಂತನೆಯ ಚಿಲುಮೆ ಯಾದಗಿರಿ ತಾಲ್ಲೂಕಿನ ದಲಿತ ಸಾಹಿತ್ಯ ‌ಚನ್ನಣ್ಣ ವಾಲೀಕಾರ ಅವರ ಕಾವ್ಯಗಳಲ್ಲಿ ಜನಪರ ನಿಲುವು, ಗೀತಾನಾಗಭೂಷಣ ಅವರ ಕಾದಂಬರಿಗಳಲ್ಲಿ ದಲಿತ ಸಂವೇದನೆ, ವಚನಕಾರರು ಮತ್ತು ದಲಿತ ಪ್ರಜ್ಞೆ ಬಂಡಾಯ ಕಾದಂಬರಿಗಳಲ್ಲಿ ದಲಿತರ ಬದುಕಿನ ಚಿಂತನೆ ವಿಚಾರ ಸಾಹಿತ್ಯದ ಒಳನೋಟಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ. ಇತರರ ಜೊತೆಗೂಡು ಚಂದ್ರಬಿಂಬ ಎಂಬ ಅಭಿನಂದನಾ ಗ್ರಂಥ ಹೊರತಂದಿದ್ದಾರೆ. 

ವೆಂಕಟೇಶ್ವರ ಕೆ. ಕೊಲ್ಲಿ

(31 Jul 1986)