About the Author

ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ ಅವರು ಮೂಲತಃ ಗದಗ ಜಿಲ್ಲೆಯ ಗದಗ ತಾಲೂಕಿನ ಸೊರಟೂರಿನವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸೊರಟೂರಿಲ್ಲಿ, ಧಾರವಾಡದಲ್ಲಿ ಎಂ.ಎಸ್.ಸಿ (ಭೌತಶಾಸ್ತ್ರ). ಎಂ.ಎ.(ಸಂಸ್ಕೃತ), ಬಿ.ಇಡ್ ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ, ಜೈನಾಲಜಿ ಮತ್ತು ಜ್ಯೋತಿಷ್ಯ ದಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಉದ್ಘೋಷಕರಾಗಿದ್ದಾರೆ. ಕಥೆ, ಕವನ, ಕಾದಂಬರಿ ನಾಟಕ ಓದು-ಬರಹ, ಪ್ರವಾಸ, ಕೃಷಿ ಅವರ ಹವ್ಯಾಸ. ಇವರು ಪತ್ರಿಕಾ ಅಂಕಣಕಾರರು. ನಾಟಕಗಳ ನಿರ್ದೇಶನ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ.

 ಕೃತಿಗಳು : ಕಾಲಚಕ್ರ

ವಿದ್ವಾನ್ ನವೀನಶಾಸ್ತ್ರಿ ಪುರಾಣಿಕ

Books by Author