About the Author

ಡಾ. ವಿಲ್ಯಂ ಮಾಡ್ತಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಟ್ಟಣದವರು. ಕನ್ನಡ , ಇಂಗ್ಲಿಷ್, ತುಳು, ಕೊಂಕಣಿ ಭಾಷೆಯಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದವರು.  ವೈಜ್ಞಾನಿಕ ಚಿಂತನೆಗಳ ಬರಹಗಾರರು ಹೌದು. ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು, 1997ರ ಜನವರಿಯಲ್ಲಿ ಮುಂಬೈಯಲ್ಲಿ ಜರುಗಿದ 17ನೇ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು.

ಕೃತಿಗಳು: ಕನ್ನಡ ಭಾಷೆಯ ರೂಪುರೇಷೆಗಳು (197೫), ಕರ್ನಾಟಕ ಜಾಪನದ (1989), ಜಾನಪದ ವೈಜ್ಞಾನಿಕ ಅಧ್ಯಯನ ಮತ್ತು ಸಂಕೇತ ವೈಜ್ಞಾನಿಕ ವಿಶ್ಲೇಷಣೆ (1989), ಕನ್ನಡ ವ್ಯಾಕರಣ ಸಮಸ್ಯೆಗಳು: ಭಾಷಾ ವೈಜ್ಞಾನಿಕ ವಿಶ್ಲೇಷಣೆ (1989), ಜಾನಪದ ಸಾಹಿತ್ಯ ದರ್ಶನ: ಜನಾಂಗಿಕ ಅಧ್ಯಯನ (1993). ನಿಘಂಟು ರಚನಾ ವಿಜ್ಞಾನ ಹಾಗೂ ಆಂಗ್ಲ ಕೃತಿ ‘The Christian Konkani of South Kanara: a linguistic analysisi ಮತ್ತು ಕಿಟಲ್ ಕನ್ನಡ-ಇಂಗ್ಲಿಷ್ ಶಬ್ದಕೋಶಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ನಡೆದ ವಿಚಾರ ಸಂಕಿರಣ ಅಂಗವಾಗಿ ರಚಿಸಿದ ಲೇಖನಗಳ ಸಂಗ್ರಹ ಕೃತಿ `A Dictionary wirh a mission: papers of the international Conference on the Occasion of the Centenary Celebrations of the Kittel's Kannada-English Dictionary' 1998 ರಲ್ಲಿ ಪ್ರಕಟವಾಗಿದೆ. . 

ವಿದ್ವಾಂಸ ವಿಲ್ಯಂ ಮಾಡ್ತಾ ಅವರು ಮಂಗಳೂರಿನಲ್ಲಿ 2004ರ ನವೆಂಬರ್ 9 ರಂದು ಹೃದಯಾಘಾತದಿಂದ ನಿಧನರಾದರು. 

ವಿಲ್ಯಂ ಮಾಡ್ತಾ

(17 Jan 1940-09 Nov 2004)