About the Author

ಲೇಖಕ, ಬರಹಗಾರ ವಿರೂಪಾಕ್ಷ ಬಡಿಗೇರ ಅವರು ಮೂಲತಃ ಐಹೊಳೆ ಯವರು. ಮಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಇವರು ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಕರಾವಳಿಯ ಅನೇಕ ಕಲಾವಿದರಿಗೆ ನೆರವಾಗಿದ್ದಾರೆ. ಕಲಾ ಶಿಬಿರಗಳನ್ನು ಏರ್ಪಡಿಸಿ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಿಲ್ಪಕಲೆ, ಚರಿತ್ರೆ, ಕಾವ್ಯ, ನಾಟಕ, ಮನೋವಿಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ 32 ಕೃತಿಗಳನ್ನು ರಚಿಸಿದ ಡಾ. ಬಡಿಗೇರ ಅವರು ಹಂಪಿ ವಿ.ವಿ.ಯಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ.

'ಕೃಷಿ ಕಾಮಧೇನು' ಎಂಬ ಪತ್ರಿಕೆಯನ್ನು 13 ವರ್ಷಗಳಿಂದ ನಡೆಸುತ್ತಿರುವ ಇವರು, ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಶ್ರೀ ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ ಮತ್ತು ಮಾಧ್ಯಮ ರತ್ನ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.  ‘ಬಾದಾಮಿ ಚಾಲುಕ್ಯ ದೇವಾಲಯಗಳ ತಲ ವಿನ್ಯಾಸಗಳು’ ಅವರ ಕೃತಿ ಹಾಗೂ ಇನ್ನಿತರ ಕೃತಿ ಸೇರಿದಂತೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಕಟಿಸಿದೆ. ಅಶ್ವತ್ಥಪುರ ಬಾಬುರಾಯ ಆಚಾರ್ಯ ಅವರ ಮತ್ತೊಂದು ಕೃತಿ.

ವಿರೂಪಾಕ್ಷ ಬಡಿಗೇರ