ಅಶ್ವತ್ಥಪುರ ಬಾಬುರಾಯ ಆಚಾರ್ಯ

Author : ವಿರೂಪಾಕ್ಷ ಬಡಿಗೇರ

Pages 56

₹ 60.00




Year of Publication: 2020
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 294ನೇ ಪುಸ್ತಕ ‘ಅಶ್ವತ್ಥಪುರ ಬಾಬುರಾಯ ಆಚಾರ್ಯ’. ದೇವಸ್ಥಾನಗಳಲ್ಲಿ ರಥೋತ್ಸವಗಳಿಗೆ ಬಳಸುವ ರಥಗಳ ನಿರ್ಮಾಣ ಅಪೂರ್ವ ಭಾರತೀಯ ಕಲೆ. ಮೂಡುಬಿದಿರೆಯ ಸಮೀಪದ ಅಶ್ವತ್ಥಪುರದ ಬಾಬುರಾಯ ಆಚಾರ್ಯರು ರಥಗಳು ಮತ್ತು ಲಾಲಕಿ, ಪಾಲಕಿ, ಬಂಡಿ, ಮೂರ್ತಿ, ಮಂಟಪ ಇತ್ಯಾದಿ ದೇವತಾರಾಧನೆಯ ವಿವಿಧ ಆಯಾಮಗಳಿಗೆ ಅಗತ್ಯವಿರುವ ಸುಂದರ ಶಾಸ್ತ್ರೀಯ ಕಾಷ್ಠಶಿಲ್ಪಗಳನ್ನು ರೂಪಿಸಿದ ಶಿಲ್ಪಿಯಾಗಿದ್ದು ಅವರ ಕಲೆ-ಜೀವನಪ್ರೀತಿ-ಬದುಕು ಕುರಿತ ಸಂಕ್ಷಿಪ್ತ ಪರಿಚಯ ಇಲ್ಲಿದೆ.

About the Author

ವಿರೂಪಾಕ್ಷ ಬಡಿಗೇರ

ಲೇಖಕ, ಬರಹಗಾರ ವಿರೂಪಾಕ್ಷ ಬಡಿಗೇರ ಅವರು ಮೂಲತಃ ಐಹೊಳೆ ಯವರು. ಮಂಗಳೂರು ಮತ್ತು ಧಾರವಾಡ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಇವರು ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಕರಾವಳಿಯ ಅನೇಕ ಕಲಾವಿದರಿಗೆ ನೆರವಾಗಿದ್ದಾರೆ. ಕಲಾ ಶಿಬಿರಗಳನ್ನು ಏರ್ಪಡಿಸಿ ಯುವ ಕಲಾವಿದರಿಗೆ ಮಾರ್ಗದರ್ಶನ ನೀಡಿದ್ದಾರೆ. ಶಿಲ್ಪಕಲೆ, ಚರಿತ್ರೆ, ಕಾವ್ಯ, ನಾಟಕ, ಮನೋವಿಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ 32 ಕೃತಿಗಳನ್ನು ರಚಿಸಿದ ಡಾ. ಬಡಿಗೇರ ಅವರು ಹಂಪಿ ವಿ.ವಿ.ಯಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. 'ಕೃಷಿ ಕಾಮಧೇನು' ಎಂಬ ಪತ್ರಿಕೆಯನ್ನು 13 ವರ್ಷಗಳಿಂದ ನಡೆಸುತ್ತಿರುವ ಇವರು, ವಿಶ್ವೇಶ್ವರಯ್ಯ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಶ್ರೀ ...

READ MORE

Related Books