About the Author

ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.

’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ಅನುವಾದ ಪುಸ್ತಕ ಬಹುಮಾನ ಲಭಿಸಿದೆ.

ಅವರ `ಯುದ್ಧವೆಂದರೆ ಹುಡುಗಾಟವಲ್ಲ...’ ಪತ್ರಿಕಾ ಬರಹಗಳ ಸಂಕಲನವನ್ನು ಹೊನ್ನಾವರ ಕೆರೆಕೋಣಾದ ಬಂಡಾಯ ಪ್ರಕಾಶನ ಪ್ರಕಟಿಸಿದೆ. ಹಿರಿಯ ಧುರೀಣ ಜ್ಯೋತಿ ಬಸು ಅವರ ಆತ್ಮಕಥನ ಮೈ ಮೆಮೋಯರ್ಸ್' ಅನ್ನು ಅನುವಾದಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಎರಡು ಕೊಂಕಣಿ ಕೃತಿಗಳು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿವೆ.

ವಿಶ್ವ ಕುಂದಾಪುರ

Awards