About the Author

ಲೇಖಕ ವಿಶ್ವನಾಥ ಶೆಟ್ಟಿ (ಪಾಂಗಾಳ) ಅವರು ಮೂಲತಃ ಉಡುಪಿ ಜಿಲ್ಲೆಯ ಪಾಂಗಾಳದವರು. ತಂದೆ ಅಂತಯ್ಯಶೆಟ್ಟಿ, ತಾಯಿ ರಾಧಾ. ಪಾಂಗಾಳದಲ್ಲಿ ಪ್ರಾಥಮಿಕ ಹಾಗೂ ದಂಡತೀರ್ಥದಲ್ಲಿ ಪ್ರೌಢಶಿಕ್ಷಣ, ಮುಂಬೈಯ ಶಾರದಾ ವಿಜಯ ರಾತ್ರಿ ಶಾಲೆಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಬಾಹ್ಯ ವಿದ್ಯಾರ್ಥಿಯಾಗಿ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎ ಪದವೀಧರರು. ಇವರು ಬರೆದ ಕಥೆ,ಕವನ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪುಣೆಯಲ್ಲಿ ಬಂಟರ ಸಂಘದಿಂದ ಪ್ರಕಟವಾಗುವ ತ್ರೈಮಾಸಿಕ ‘ಕಲ್ಪವೃಕ್ಷ’ ಪತ್ರಿಕೆಯ ಸಂಪಾದಕರು. ಮರಾಠಿಗರಿಗೆ ಕನ್ನಡ ಕಲಿಸುವ ಚಟುವಟಿಕೆಯಲ್ಲಿ ಉತ್ಸುಕರು. ಪುಣೆಯಲ್ಲಿ ಕನ್ನಡ ಸಂಘ, ತುಳುಕೂಟದ ಸದಸ್ಯರು.  ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಸ್ಥಾಪಿಸಿ, ಸ್ವತಃ ಅಭಿನಯದೊಂದಿಗೆ ಪ್ರೋತ್ಸಾಹ. ಸಮ್ಮೇಳನ, ಶಿಬಿರಗಳಲ್ಲಿ ಕಥೆ,ಕವನ ವಾಚಿಸಿದ್ದಾರೆ. .

ಕೃತಿಗಳು: ಮಾವನ ಮಗಳು, ರುದ್ರಗಾನ, ನೀರಿಲ್ಲದ ಮಳೆ(ಕವನ ಸಂಕಲನ), ಭಾಗ್ಯಲಕ್ಷ್ಮೀ, ಮರ ಚಿಗುರಿದಾಗ (ಕಥಾ ಸಂಕಲನಗಳು), ನಗುವ ಮಗು (ಕನ್ನಡ ಕಲಿಯುವವರಿಗಾಗಿ ಶಿಶುಗೀತೆಗಳ ಸಂಕಲನ), ಪಹಾಟ್ (ಮರಾಠಿ ಭಾಷೆಯ ಕವನ ಸಂಕಲನ), ಪಾಂಗಾಳದ ಪಿಂಗಾರ (ತುಳು ಭಾಷೆಯ ಕವನ ಸಂಕಲನ), ಬೆಂಕಿಯಲ್ಲಿ ಬೆಂದ ಬಂಗಾರ (ಶ್ರೀ ಜ್ಞಾನೇಶ್ವರ ಮಹಾರಾಜರ ಜೀವನ ಚರಿತ್ರೆ) ಜಗದ್ಗುರು (ತುಕಾರಾಮ ಮಹಾರಾಜರ ಚರಿತ್ರೆ), ಸಂತ ಕಬೀರದಾಸ (500 ದೋಹೆಗಳ ಕನ್ನಡ ಅರ್ಥ ವಿವರಣೆ ಸಹಿತ)

ಪ್ರಶಸ್ತಿ-ಪುರಸ್ಕಾರಗಳು: ಭಾಗ್ಯಲಕ್ಷ್ಮೀ ಕಥೆಗೆ ಮುಂಬೆಳಕು ಪ್ರಶಸ್ತಿ, ಅಕ್ಕಲಕೋಟೆಯಿಂದ ಡಾ. ವಸಂತ ದಿವಾಣಗಿ ಪ್ರಶಸ್ತಿ, ಮಹಾರಾಷ್ಟ್ರ ರಾಜ್ಯಪಾಲ ಪಿ. ವಿದ್ಯಾಸಾಗರರಿಂದ (2018) ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ (2019) ಸನ್ಮಾನ-ಪ್ರಶಸ್ತಿ, ಭಾಷಾಬಾಂಧವ್ಯಕ್ಕಾಗಿ ಮಹಾರಾಷ್ಟ್ರದ ಪುಣೆಯಲ್ಲಿ (2020) ಮಹಾನಗರ ಪಾಲಿಕೆಯಿಂದ ಸನ್ಮಾನ-ಪ್ರಶಸ್ತಿ, ಮರಾಠಿ-ಕನ್ನಡ ಸ್ನೇಹ ವರ್ಧನ ಕೇಂದ್ರದಂದ ಪುಣೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿಗಳು ಲಭಿಸಿವೆ.

ವಿಶ್ವನಾಥಶೆಟ್ಟಿ (ಪಾಂಗಾಳ)

(10 May 1948)