About the Author

ಡಾ.ವಿಠಲರಾವ್ ಟಿ. ಗಾಯಕ್ವಾಡ್ ಅವರು ಮೂಲತಃ ಬಳ್ಳಾರಿಯವರು. 22-07-1960ರಂದು ಜನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ, ಭಾಷಾಂತರ ಅಧ್ಯಯನ, ಮರಾಠಿ ಮತ್ತು ಇಂಗ್ಲಿಷಿನಿಂದ ಕೃತಿಗಳ ಭಾಷಾಂತರ, ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ) ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಲಜ್ಜಾಗೌರಿ (ಅನುವಾದ), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ, ಬೇಂದ್ರೆಯವರ ಮರಾಠಿ ಸಾಹಿತ್ಯ ಕೃಷಿ, ಕನ್ನಡ-ಮರಾಠಿ ಸಾಂಸ್ಕೃತಿಕ ಬಾಂಧವ್ಯ, ಶಿಖರ ಶಿಂಘಣಾಪುರದ ಶ್ರೀ ಶಂಭು ಮಹಾದೇವ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅವರ ‘ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ’ ಕನ್ನಡಾನುವಾದಕ್ಕೆ 2019ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ದೊರೆತಿದೆ. 

ವಿಠಲರಾವ್ ಟಿ. ಗಾಯಕ್ವಾಡ್

(22 Jul 1960)

Awards