ಉರಿಗೆಂಡ

Author : ವಿಠಲರಾವ್ ಟಿ. ಗಾಯಕ್ವಾಡ್

Pages 220

₹ 230.00




Year of Publication: 2022
Published by: ಪರಾಗ ಪುಸ್ತಕ
Address: #112/2, 22ನೇ ಕ್ರಾಸ್, ಕೃಷ್ಣಯ್ಯಾ ಲೇಔಟ್, ಬೆಂಗಳೂರು- 560085\n
Phone: 8660059424

Synopsys

ʻಆಗ್’ ಎಂಬ ಮರಾಠಿ ಕಾದಂಬರಿಯ ಕನ್ನಡ ಅನುವಾದ ಕೃತಿ ʻಉರಿಗೆಂಡʼ. ವಿಠಲರಾವ್‌ ಟಿ. ಗಾಯಕ್ವಾಡ್ ಅವರು ಅನುವಾದಿಸಿದ್ದಾರೆ. ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ದಲಿತರು ನಡೆಸಿದ ‘ನಾಮಾಂತರ ಚಳುವಳಿ’ಯ ಕಥಾವಸ್ತುವನ್ನು ಇಟ್ಟುಕೊಂಡು ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ. ʻಮರಾಠಾವಾಡ ವಿಶ್ವವಿದ್ಯಾಲಯʼ ಎನ್ನುವುದನ್ನು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಿ ಎಂಬ ಬೇಡಿಕೆಯೇ ಈ ಚಳುವಳಿಯ ಮುಖ್ಯ ಆಶಯ. ನೂರಾರು ಜನ ಇದಕ್ಕಾಗಿ ತಮ್ಮ ರಕ್ತವನ್ನು ಹರಿಸಿದ್ದರು. ಹೀಗೆ ದೀರ್ಘ ಕಾಲದ ಈ ಮಹತ್ವದ ಹೋರಾಟ ಒಂದು ಹೊಸ ಸಾಮಾಜಿಕ ಕ್ರಾಂತಿಯಾಗಿಯೂ ಪರಿವರ್ತನೆಯನ್ನು ಪಡೆಯಿತು. ಅಸಂಖ್ಯಾತ ದಲಿತ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದರು. ಇಂಥ ಹೋರಾಟದ ಕಥನ ಈ ಕೃತಿಯಲ್ಲಿ ದಾಖಲಾಗಿದೆ.

About the Author

ವಿಠಲರಾವ್ ಟಿ. ಗಾಯಕ್ವಾಡ್
(22 July 1960)

ಡಾ.ವಿಠಲರಾವ್ ಟಿ. ಗಾಯಕ್ವಾಡ್ ಅವರು ಮೂಲತಃ ಬಳ್ಳಾರಿಯವರು. 22-07-1960ರಂದು ಜನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಮರಾಠಿ ಸಾಹಿತ್ಯ ಅಧ್ಯಯನ ಮತ್ತು ವಿಮರ್ಶೆ, ಸಾಂಸ್ಕೃತಿಕ ಮತ್ತು ತೌಲನಿಕ ಅಧ್ಯಯನ, ಭಾಷಾಂತರ ಅಧ್ಯಯನ, ಮರಾಠಿ ಮತ್ತು ಇಂಗ್ಲಿಷಿನಿಂದ ಕೃತಿಗಳ ಭಾಷಾಂತರ, ಮಹಿಳಾ ಅಧ್ಯಯನ (ಲಿಂಗ ಸಂಬಂಧಿ ಅಧ್ಯಯನ) ವಿಷಯಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು ಲಜ್ಜಾಗೌರಿ (ಅನುವಾದ), ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶ್ರೀ ರಾಮಾಯಣ ದರ್ಶನಂ ನಲ್ಲಿ ಪೌರಾಣಿಕತೆ, ...

READ MORE

Related Books