About the Author

ಲೇಖಕ, ಮಕ್ಕಳ ಸಾಹಿತಿ ವೈ. ಜಿ. ಭಗವತಿ ಅವರು ಪ್ರಸ್ತುತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಿಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೆಯದಿಂದಲೋ ಸಣ್ಣ ಕಥೆ, ಮಕ್ಕಳ ಕಥೆ, ಕವನ, ಕಾದಂಬರಿ, ಲೇಖನ ರಚನೆಯಲ್ಲಿ ಆಸಕ್ತಿ ತಳೆದಿದ್ದಾರೆ. ‘ದೇಮಮ್ಮನ ಲೋಟ’(2016), `ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ (2019) ಅವರ ಪ್ರಕಟಿತ ಮಕ್ಕಳ ಕಥಾಸಂಕಲನ. ಅವರ ‘ಬದುಕಿನ ಸುತ್ತಮುತ್ತ’ (2018) ಲೇಖನಸಾಹಿತ್ಯ ಪ್ರಕಟವಾಗಿವೆ. ಅವರ ಮತ್ತೊಂದು ‘ಮತ್ತೆ ಹೊಸ ಗೆಳೆಯರು’ ಎಂಬ ಮಕ್ಕಳ ಕಾದಂಬರಿ ನೈರುತ್ಯ ಕನ್ನಡ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಕಳೆದ ಒಂದೂವರೆ ವರ್ಷದಿಂದ ಪ್ರಕಟವಾಗುತ್ತಿದೆ. ಆಕಾಶವಾಣಿ ಧಾರವಾಡ ಕೇಂದ್ರದಿಂದ ಅವರ ಪುಸ್ತಕ ಪರಿಚಯ, ವಿಷಯ ಭಾಷಣಗಳು ಪ್ರಸಾರವಾಗೊಂಡಿವೆ. ಅವರ ‘ದೇವಮ್ಮನ ಲೋಟ’ ಮಕ್ಕಳ ಕೃತಿಗೆ 2016ರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಮಕ್ಕಳ ಚಂದಿರ ಪುರಸ್ಕಾರ ದೊರೆತಿದೆ. ಜಿಲ್ಲಾ ಮಟ್ಟದ ಶಿಕ್ಷಕ ಪುರಸ್ಕಾರ `ಜನ ಮೆಚ್ಚಿದ ಶಿಕ್ಷಕ’ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

ವೈ. ಜಿ. ಭಗವತಿ

(01 Jun 1971)