ದೇವಮ್ಮನ ಲೋಟ

Author : ವೈ. ಜಿ. ಭಗವತಿ

Pages 92

₹ 100.00
Year of Publication: 2016
Published by: ವಿಜಯಾ ಪ್ರಕಾಶನ
Address: ಕಲಘಟಗಿ-581204
Phone: 9448961199

Synopsys

ಕರ್ನಾಟಕ ಬಾಲವಿಕಾಸ ಅಕಾಡೆಮಿಯ 2016ರ ಸಾಲಿನ ಮಕ್ಕಳ ಚಂದಿರ ಪುರಸ್ಕಾರ ಪಡೆದ ಮಕ್ಕಳ ಕಥಾಸಂಕಲನ `ದೇವಮ್ಮನ ಲೋಟ’. ವಿಭಿನ್ನಕಥಾವಸ್ತುಗಳನ್ನು ಹೊಂದಿರುವ ಇಲ್ಲಿಯ ಹದಿನಾರು ಕಥೆಗಳು ಮಕ್ಕಳ ಗಮನ ಸೆಳೆಯುತ್ತವೆ. ಕಲಾವಿದ ಮಂಜಣ್ಣ ನಾಯಕ ಅವರು ಪುಸ್ತಕಕ್ಕೆ ಆಕರ್ಷಕ ಮುಖಪುಟ ರಚಿಸಿ, ಕತೆಗಳಿಗೆ ಅಂದವಾದ ಚಿತ್ರಗಳನ್ನು ರಚಿಸಿದ್ದಾರೆ. ಪರಿಸರ ಸಂಬಂಧಿತ ಕತೆಗಳೊಂದಿಗೆ ನೀತಿಯುಕ್ತ ಮೌಲ್ಯಯುತ ಕಥೆಗಳಿವೆ. ಈ ಎಲ್ಲ ಕಥೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.

About the Author

ವೈ. ಜಿ. ಭಗವತಿ
(01 June 1971)

ಲೇಖಕ, ಮಕ್ಕಳ ಸಾಹಿತಿ ವೈ. ಜಿ. ಭಗವತಿ ಅವರು ಪ್ರಸ್ತುತ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಿಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹರೆಯದಿಂದಲೋ ಸಣ್ಣ ಕಥೆ, ಮಕ್ಕಳ ಕಥೆ, ಕವನ, ಕಾದಂಬರಿ, ಲೇಖನ ರಚನೆಯಲ್ಲಿ ಆಸಕ್ತಿ ತಳೆದಿದ್ದಾರೆ. ‘ದೇಮಮ್ಮನ ಲೋಟ’(2016), `ಸುಂದ್ರಮ್ಮಜ್ಜಿಯ ಮೊಮ್ಮಗನಂತೆ’ (2019) ಅವರ ಪ್ರಕಟಿತ ಮಕ್ಕಳ ಕಥಾಸಂಕಲನ. ಅವರ ‘ಬದುಕಿನ ಸುತ್ತಮುತ್ತ’ (2018) ಲೇಖನಸಾಹಿತ್ಯ ಪ್ರಕಟವಾಗಿವೆ. ಅವರ ಮತ್ತೊಂದು ‘ಮತ್ತೆ ಹೊಸ ಗೆಳೆಯರು’ ಎಂಬ ಮಕ್ಕಳ ಕಾದಂಬರಿ ನೈರುತ್ಯ ಕನ್ನಡ ಮಾಸಪತ್ರಿಕೆಯಲ್ಲಿ ಧಾರವಾಹಿಯಾಗಿ ಕಳೆದ ಒಂದೂವರೆ ವರ್ಷದಿಂದ ...

READ MORE

Related Books