About the Author

ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ಯೋಗೀಶ್ ಕೈರೋಡಿ ಅವರು ಮಂಗಳೂರು ವಿ.ವಿ. ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕರ ಸಂಘ 'ವಿಕಾಸ'ದ ಕಾರ್ಯದರ್ಶಿ. ’ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಚಲನಶೀಲತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪಡೆದಿರುವ ಅವರು 'ಅನ್ನ ಬಣ್ಣಗಳ ಸುತ್ತ' (2006) ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ’ಕವಲು ದಾರಿಯಲ್ಲೊಂದು ನಕ್ಷತ್ರ' (2009) ಎಂಬ ಲೇಖನಗಳ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 'ಮದಪ್ಪರಾವಂದಿ ತುಳುವೆರ್' ಮಾಲೆಗಾಗಿ 'ಸೇಡಿಯಾಪು ಕೃಷ್ಣ ಭಟ್ಟ' (2014) ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇವರ ಅಧ್ಯಯನ ಗ್ರಂಥ 'ತುಳುತಿಟ್ಟು ಯಕ್ಷಗಾನ ಸ್ವರೂಪ ಮತ್ತು ಸಾಧ್ಯತೆ' (2016) ಎಂಬ ಕೃತಿಯನ್ನು ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಗ್ರಾಮಚರಿತ್ರೆ ಕೋಶದ ಅಧ್ಯಯನಕಾರ್ಯದಲ್ಲಿ ಕೈಜೋಡಿಸಿರುವ ಕೈರೋಡಿಯವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಮಾಲೆಯಲ್ಲಿ ಕೈರೋಡಿಯವರು ಬರೆದ 'ಮಿಜಾರು ಅಣ್ಣಪ್ಪ' ಕೃತಿ ಪ್ರಕಟವಾಗಿದೆ.

ಯೋಗೀಶ್ ಕೈರೋಡಿ