ಕೆಮ್ಮಣ್ಣು ನಾರಣಪ್ಪಯ್ಯ

Author : ಯೋಗೀಶ್ ಕೈರೋಡಿ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 242ನೇ ಪುಸ್ತಕ. ಮದ್ದಳೆಯ ಮೋಡಿಗಾರ ಕೆಮ್ಮಣ್ಣು ನಾರ್ಣಪ್ಪಯ್ಯನವರು (1896 -1976) ವೃತ್ತಿ-ಪ್ರವೃತ್ತಿ ಎರಡರಲ್ಲೂ ಮೆಚ್ಚುಗೆಗೆ ಪಾತ್ರವಾಗಿ ಜನಮಾನಸದಲ್ಲಿ ಹಸಿರಾಗಿ ಉಳಿದ ವಿರಳರಲ್ಲಿ ಒಬ್ಬರು. ವೃತ್ತಿಯಲ್ಲಿ ಶಾನುಭೋಗರಾಗಿ, ಪ್ರವೃತ್ತಿಯಲ್ಲಿ ನಾದಪೂರ್ಣ ಮದ್ದಳೆಗಾರರಾಗಿ, ಯಕ್ಷಗಾನ ಪ್ರಸಂಗಕರ್ತರಾಗಿ ಖ್ಯಾತಿ-ಪ್ರೀತಿಗೆ ಭಾಜನರಾದವರು. 1912ರಿಂದ ಯಕ್ಷಗಾನದ ಆಟ ಕೂಟಗಳಲ್ಲಿ ತೊಡಗಿಸಿಕೊಂಡು ಮದ್ದಳೆವಾದನದಲ್ಲಿ ಯಾರೂ ಅಳಿಸಲಾಗದ ಗುರುತನ್ನು ಮೂಡಿಸಿದರು. ಅವರ ಮದ್ದಳೆವಾದನದ ಸೊಗಸನ್ನು ಶಿವರಾಮ ಕಾರಂತರು ತಮ್ಮ 'ಯಕ್ಷಗಾನ ಬಯಲಾಟ' ಕೃತಿಯಲ್ಲಿಯೂ ಉಲ್ಲೇಖಿಸಿದ್ದಾರೆ. ಅವರ ಜೀವನ-ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.

About the Author

ಯೋಗೀಶ್ ಕೈರೋಡಿ

ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ. ಯೋಗೀಶ್ ಕೈರೋಡಿ ಅವರು ಮಂಗಳೂರು ವಿ.ವಿ. ಪದವಿ ಕಾಲೇಜು ಕನ್ನಡ ಪ್ರಾಧ್ಯಾಪಕರ ಸಂಘ 'ವಿಕಾಸ'ದ ಕಾರ್ಯದರ್ಶಿ. ’ತೆಂಕುತಿಟ್ಟು ಯಕ್ಷಗಾನ ರಂಗಭೂಮಿಯಲ್ಲಿ ಚಲನಶೀಲತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪಡೆದಿರುವ ಅವರು 'ಅನ್ನ ಬಣ್ಣಗಳ ಸುತ್ತ' (2006) ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ’ಕವಲು ದಾರಿಯಲ್ಲೊಂದು ನಕ್ಷತ್ರ' (2009) ಎಂಬ ಲೇಖನಗಳ ಸಂಕಲನವನ್ನೂ ಪ್ರಕಟಿಸಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 'ಮದಪ್ಪರಾವಂದಿ ತುಳುವೆರ್' ಮಾಲೆಗಾಗಿ 'ಸೇಡಿಯಾಪು ಕೃಷ್ಣ ಭಟ್ಟ' (2014) ಕೃತಿಯನ್ನು ರಚಿಸಿಕೊಟ್ಟಿದ್ದಾರೆ. ಇವರ ಅಧ್ಯಯನ ಗ್ರಂಥ 'ತುಳುತಿಟ್ಟು ಯಕ್ಷಗಾನ ...

READ MORE

Related Books