ಅಂದಮಾನಿನ ಎಳೆಯನು ಹಿಡಿದು

Author : ಲತಾ ಗುತ್ತಿ

Pages 148

₹ 105.00




Year of Publication: 2013
Published by: ಸಿರಿವರ ಪ್ರಕಾಶನ
Address: ನಂ ಎಮ್7/ಬಿ 8th ಕ್ರಾಸ್ ಲಕ್ಷ್ಮಿನಾರಾಯಣಪುರ, ಬೆಂಗಳೂರು.
Phone: 9844109706

Synopsys

ಲತಾ ಗುತ್ತಿಯವರರು ಕನ್ನಡ ಸಾಹಿತ್ಯದಲ್ಲಿ ಪರಿಚಿತರು. ಕಥೆ, ಕವನ, ಕಾದಂಬರಿ ಪ್ರವಾಸ ಕಥನ, ಅನುವಾದ ಹೀಗೆ ಮುಂತಾದ ಸಾಹಿತ್ಯ ಪ್ರಕಾರದಲ್ಲಿ ತೊಡಗಿಸಿಕೊಂಡ  ಇವರು  ತಾವು ಕೈಗೊಂಡ ವಿದೇಶದ ಪ್ರವಾಸದ ಕುರಿತು ಅಂದಮಾನಿನ ಎಳೆಯ ಹಿಡಿದು ಪ್ರವಾಸ ಕಥನಯನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ಅಂದಮಾನಿನ ಕುರಿತಾದ ಚಿಕ್ಕ ಪುಟ್ಟ ದ್ವೀಪಗಳ ಉಡಿತುಂಬ ತುಂಬಿಕೊಂಡು ನಿಂತ ಮನಮೋಹಕ ಹವಳದ ದಿಬ್ಬಗಳ ಸೌಂದರ್ಯದ ಕುರಿತು. ಮತ್ತು ಸುನಾಮಿ ಹೊಡೆತಕ್ಕೆ ಸಿಕ್ಕು ನಲುಗಿದ ಅಂದಮಾನಿನ ಸಮಕ್ಷಮದ ಸುತ್ತಾಟದ ಸಾಕ್ಷ್ಯಚಿತ್ರಗಳ ಕುರಿತು ವಿವರಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಆಡಳಿತದಲ್ಲಿ ಅಂದಮಾನಿನ ಸೆಲ್ಯೂಲಾರ್ ಜೈಲು ಅಂದಿನ ಖೈದಿಗಳ ನರಕಯಾತನೆ ಕಣ್ಮುಂದೆ ತೆಗೆದುಕೊಳ್ಳುವುದು, ಹಾಗೆಯೇ ಸಮುದ್ರದ ದಂಡೆಗುಂಟ ಬೆಳೆದ ದಟ್ಟ ಕಾಡಿನೊಳಗೆ ರಾಕ್ಷಸರಂತಹ ಕರಿಜನರಿರುವರೆನ್ನುವ ನೆಗ್ರಿಟೋ ಮೂಲದ ಕಪ್ಪುಬಣ್ಣದ ಜಾರವಾ, ಓಂಗೇಗಳು, ಸೆಂಟಿನೇಲಿಸರನ್ನು, ನಿಕೋಬಾರಿನಲ್ಲಿ ಮಂಗೋಲಿಯನ್ನ ಮೂಲದ ಶೋಂಪಿಯನ್ನರನ್ನು ನೋಡುವುದು ಸಾಧ್ಯವಾದರೆ ಧೈರ್ಯದಿಂದ ಅವರ ಸಂಸ್ಕೃತಿಯ ಬಗೆಗೆ ತಿಳಿದಿಕೊಳ್ಳುವ ಕೃತಿ ಇದಾಗಿದೆ.

About the Author

ಲತಾ ಗುತ್ತಿ
(12 August 1953)

ಮೂಲತಃ ಬೆಳಗಾವಿಯವರಾದ ಡಾ. ಲತಾ ಗುತ್ತಿ ಅವರು ತಮ್ಮ ಪ್ರವಾಸ ಕಥನ ಹಾಗೂ ಕವಿತೆಗಳ ಮೂಲಕ ಚಿರಪರಿಚಿತರಿದ್ದಾರೆ. ಲತಾ ಅವರು ಜನಿಸಿದ್ದು 1953ರ ಆಗಸ್ಟ್ 12ರಂದು. ಬೆಂಗಳೂರು ಕಂಪ್ಯೂಟರ್ ಟೆಕ್ನಾಲಜಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ತಂದೆ ನಾಗನಗೌಡ, ತಾಯಿ -ಶಾಂತಾದೇವಿ ಪಾಟೀಲ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪದವಿ ಪಡೆದಿರುವ ಅವರು ಮೈಸೂರು ವಿಶ್ವವಿದ್ಯಾಲಯಿಂದ ಇಂಗ್ಲಿಷಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  ಯುರೋನಾಡಿನಲ್ಲಿ (1993), ನಾ ಕಂಡಂತೆ ಅರೇಬಿಯಾ (1995), ಅಂಡಮಾನಿನ ಎಳೆಯನು ಹಿಡಿದು (2013), ಚಿರಾಪುಂಜಿಯವರೆಗೆ (2017) ಅವರ ಪ್ರವಾಸ ಕಥನಗಳಾದರೆ ಹೆಜ್ಜೆ (2004), ಕರಿನೀರು (2015) ಕಾದಂಬರಿಗಳು.  “ಪ್ರವಾಸ ಸಾಹಿತ್ಯ ...

READ MORE

Related Books