ಬೆಟ್ಟದಡಿಯ ಬಿದಿರ ಹೂ

Author : ಎಚ್. ಎನ್. ಆರತಿ



Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜಯಚಾಮರಾಜ ರಸ್ತೆ, ಬೆಂಗಳೂರು 080 22211730

Synopsys

ಕೃತಿಯ ಲೇಖಕಿಯಾದ ಆರತಿಯವರು ತ್ರಿಪುರ ರಾಜ್ಯದಲ್ಲಿ ಕೈಗೊಂಡಂತಹ ಪ್ರವಾಸದ ಕಥಾನಕ ಪುಸ್ತಕ. ತ್ರಿಪುರವೆಂಬುದು ಭಾರತದ ಈಶಾನ್ಯ ತುದಿಯಲ್ಲಿರುವಂತಹ ಒಂದು ಪುಟ್ಟ ರಾಜ್ಯ. ಪರ್ವತಗಳಿಂದ ಆವೃತಗೊಂಡಿರುವ ಈ ರಾಜ್ಯದ ಸೊಬಗನ್ನು ವರ್ಣಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ತಮ್ಮ ಪ್ರವಾಸದಲ್ಲಿ ತಾವು ನೋಡಿದ, ಕೇಳಿದ ಮತ್ತು ಅನುಭವಿಸಿದ ವಿವರಗಳನ್ನು ಕಣ್ಣಿಗೆ ಕಟ್ಟಿದ ರೀತಿಯಲ್ಲಿ ಈ ಪುಸ್ತಕದಲ್ಲಿ ಲೇಖಕರು ದಾಖಲಿಸಿದ್ದಾರೆ. ಪುಸ್ತಕದ ಮೂಲ ಉದ್ದೇಶದ ಜೊತೆ ಜೊತೆಗೆ ಉಪಕಥೆಗಳನ್ನು ಕೂಡ ಒಳಗೊಂಡಿರುವ ಈ ಪುಸ್ತಕವು ಓದುಗರಿಗೆ ತರಿಪುರ ದರ್ಶನ ಮಾಡಿಸುತ್ತದೆ. ಕೇವಲ ಅಲ್ಲಿನ ಪ್ರವಾಸಿ ಸ್ಥಾನಗಳ ಕುರಿತಷ್ಟೇ ಅಲ್ಲದೇ, ತಾವು ಅಲ್ಲಿ ಭೇಟಿಯಾದ ಸಾಹಿತಿಗಳು, ಕವಿಗಳು ಹೀಗೆ ಹಲವಾರು ವ್ಯಕ್ತಿಗಳ ಕುರಿತಾದ ವಿಷಯಗಳನ್ನು ಕೂಡ ದಾಖಲಿಸುತ್ತಾ ಹೋಗುತ್ತಾರೆ. ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಪಡುವ ಪಾಟಲು, ಭಾಷೆ ಅರಿಯದೇ ಇದ್ದಾಗ ಆಗುವಂತಹ ಪಜೀತಿಗಳ ಕುರಿತು ಬಹಳಷ್ಟು ಮಹತ್ತರವಾದ ವಿಷಯಗಳನ್ನು ಈ ಪುಸ್ತಕದಲ್ಲಿ ಲೇಖಕರು ತಿಳಿಸಿದ್ದಾರೆ. ಒಂಟಿ ಹೆಣ್ಣಿನ ಕುರಿತು ಸಮಾಜವಾಡುವ ಕುಹಕ ಮಾತುಗಳು, ಲೇಖಕರು ಅಂತಹ ಸಂಧರ್ಭಗಳನ್ನು ದಿಟ್ಟತನದಿಂದ ಎದುರಿಸಿದ ಬಗೆ ಹೀಗೆ ಎಲ್ಲ ಅನುಭವಗಳ ವಿವರಣೆ ಈ ಪುಸ್ತಕದಲ್ಲಿದೆ.

About the Author

ಎಚ್. ಎನ್. ಆರತಿ
(13 November 1966)

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ. ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ...

READ MORE

Related Books