
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಚರಿತ್ರೆಯಲ್ಲಿ 12ನೇ ಶತಮಾನದ ವಚನಯುಗ ಅನನ್ಯ. ಮೊದಲ ಬಾರಿಗೆ ಎಲ್ಲ ಸಮುದಾಯದ ವಚನಕಾರರು ಮತ್ತು ವಚನಕಾರ್ತಿಯರು ಈ ಸಾಮಾಜಿಕ, ಧಾರ್ಮಿಕ ಆಂದೋಲನದಲ್ಲಿ ರಚನಾತ್ಮಕವಾಗಿ ಪಾಲ್ಗೊಂಡವರು; ವ್ಯಕ್ತಿನಿಷ್ಠ ನೆಲೆಯಲ್ಲಿ ನಿಂತು ಸಾಮಾಜಿಕ ಪರಿವರ್ತನೆಯ ಬಗ್ಗೆ ಚಿಂತಿಸಿದವರು. ಇಂತಹ ವಿಶಿಷ್ಟ ಕಾರಣಗಳಿಂದಾಗಿ ವಚನಗಳು ಸಮಕಾಲೀನ ಕನ್ನಡದ ಲೇಖಕರನ್ನು ಇನ್ನೂ ಪ್ರಭಾವಿಸುತ್ತಿವೆ. ಇಂತಹ ಪ್ರಭಾವ ಪ್ರೇರಣೆಗಳ ಬೆಳಕಿನಲ್ಲಿ ಪ್ರಸ್ತುತ ಕನ್ನಡ ಸಮಾಜದ ಸಮಸ್ಯೆ ಮತ್ತು ಸವಾಲುಗಳನ್ನು ಅರ್ಥೈಸುವ ಪ್ರಯತ್ನವಾಗಿ ಕರೀಗೌಡ ಬೀಚನಹಳ್ಳಿ ಅವರು, ’ಬಸವಣ್ಣ: ಪುನರ್ಲೇಖ” ಕೃತಿ ರಚಿಸಿದ್ದಾರೆ.
©2025 Book Brahma Private Limited.