About the Author

ಕರೀಗೌಡ ಬೀಚನಹಳ್ಳಿ ಅವರು 1951 ಸೆಪ್ಟೆಂಬರ್‌ 10ರಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬೀಚನಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ವ್ಯಷ್ಟಿ-ಸಮಷ್ಟಿ ಪ್ರಬಂಧ ಮಂಡಿಸಿ  ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. .ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಕಾರ್ಯ ನಿರ್ವಹಿಸಿದ ನಿವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಸಾರಂಗದ ನಿರ್ದೇಶಕರಾಗಿ ನಂತರ ಕುಲಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 

ಕನ್ನಡ ಸಾಹಿತ್ಯದೆಡೆಗಿನ ಒಲವು ಕಾಲೇಜು ದಿನಗಳಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗುವಂತೆ ಮಾಡಿತ್ತು. ಇವರು ಬರೆದ ಕಥೆ, ಕವನಗಳು ತುಮಕೂರು ವಿಶ್ವವಿದ್ಯಾಲಯ ಪದವಿ ತರಗತಿಗಳಿಗೆ ಪಠ್ಯವಾಗಿವೆ. ಇವರ ಕಥೆಗಳು ಇಂಗ್ಲಿಷ್, ಮಲೆಯಾಳಂ, ತಮಿಳು, ಹಿಂದಿಗೆ ಅನುವಾದವಾಗಿವೆ.

ಇವರ ಪ್ರಮುಖ ಕೃತಿಗಳೆಂದರೆ ಕರಿಮಣ್ಣಿನ ಗೊಂಬೆಗಳು, ಸಂಧಾನ, ಸಂಜೀವಿನಿ ಮರ. ಜಾತ್ರೆಗಳು, ತೇಜಸ್ವಿ ಕಥೆಗಳ ಅಧ್ಯಯನ, ಸಂಕಥನ. ಮಳೆ ಕೋಗಿಲೆ, ಕಥನ ಕಲೆಯ ನೆಲೆಗಳು, ಚೆಲುವ ಕನ್ನಡ, ಸಿದ್ದರಾಮ ಅನುರೂಪ, ಕಥೆ ಮತ್ತು ಹಾಡು ಮುಂತಾದವು. ಇವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಬಹುಮಾನ, ಆರ್ಯಭಟ ಪ್ರಶಸ್ತಿ, ಶ್ರೀ ಕೃಷ್ಣ ಆಲನಹಳ್ಳಿ ಕಥಾ ಸ್ಪರ್ಧೆ ಬಹುಮಾನ ಮುಂತಾದ ಹಲವಾರು ಬಹುಮಾನಗಳು ಲಭಿಸಿವೆ. 

ಕರೀಗೌಡ ಬೀಚನಹಳ್ಳಿ

(10 Sep 1951)