ಜ್ಞಾನಗಂಗೋತ್ರಿ (ಕಲೆ, ಸಾಹಿತ್ಯ)

Author : ನಿರಂಜನ

Pages 737

₹ 50.00




Year of Publication: 1973
Published by: ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರ
Address: ಬೆಂಗಳೂರು

Synopsys

ಕಿರಿಯರ ವಿಶ್ವಕೋಶದ ಸರಣಿ ಕೃತಿಗಳ ಭಾಗವಾಗಿ ಸಂಪುಟ-5ರಲ್ಲಿ ಕಲೆ-ಸಾಹಿತ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ಮಾಹಿತಿ, ಸಾಹಿತಿ-ಕಲಾವಿದರ ಸಮಗ್ರ ಪರಿಚಯ ಅಸಂಖ್ಯ, ಮಾಹಿತಿಯ ಕಣಜದ ಕೃತಿ.

 ಏಳು ಸಂಪುಟಗಳಿರುವ ಕಿರಿಯರ ವಿಶ್ವಕೋಶ ಜ್ನಾನ ಗಂಗೋತ್ರಿಯು ಪ್ರಮುಖ ಶೀರ್ಷಿಕೆಯಡಿ ಈ ಕೃತಿ ಪ್ರಕಟಗೊಂಡಿದೆ. ನೃತ್ಯ, ಕಲೆ, ಸಂಗೀತ, ನಾಟಕ, ಶಿಲ್ಪ, ವಾಸ್ತುಶಿಲ್ಪ, ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳಡಿ ಚರಿತ್ರೆಪೂರ್ವ ಸಂಗತಿಗಳಿಂದ ಹಿಡಿದು ಆಧುನಿಕ ಕಲಾಪ್ರಕಾರಗಳವರೆಗೂ ನೂರಾರು ಸಂಗತಿಗಳನ್ನು ಚರ್ಚಿಸಲಾಗಿದೆ. ಕೃತಿಯಲ್ಲಿ 144 ಲೇಖನಗಳನ್ನು ಸೇರ್ಪಡೆಗೊಳಿಸಿದೆ. ಕಿರಿಯರಿಗಾಗಿ ಸಿದ್ಧಪಡಿಸಿದ ಆಹಾರದ ರೂಪದಲ್ಲಿ ಇಲ್ಲಿಯ ಮಾಹಿತಿಗಳಿವೆ.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books