About the Author

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.   

ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ಐದು ದಶಕಗಳ ಕಾಲ ಸಮೃದ್ಧವಾದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಇವರ ಬರವಣಿಗೆ ಕೃತಿ, ಕಾದಂಬರಿ, ಸಣ್ಣ ಕಥೆಗಳು, ನಾಟಕಗಳು, ಜೀವನ ಕಥನಗಳು, ರಾಜಕೀಯ ವ್ಯಾಖ್ಯಾನಗಳು ಮತ್ತು ಭಾಷಾಂತರಗಳನ್ನು ಒಳಗೊಂಡಿವೆ. ಜೊತೆಗ ಕನ್ನಡ ವಾರ್ತಾಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ನಿಯತ ಅಂಕಣಕಾರರಾಗಿದ್ದರು. ಅವರ ಸಾಧನೆಯಲ್ಲಿ ಯುವಕರಿಗಾಗಿ 7 ಸಂಪುಟಗಳ ಜ್ಞಾನ ಗಂಗೋತ್ರಿ ಅಂದರೆ ಮಕ್ಕಳ ವಿಶ್ವಕೋಶ ಹಾಗೂ ಪ್ರಪಂಚದ ಮಹತ್ತರವಾದ ವಿಶ್ವಕಥಾಕೋಶದ 25 ಸಂಪುಟಗಳು ಸೇರಿವೆ. ರಾಷ್ಟ್ರಬಂಧು, ಜನಶಕ್ತಿ, ಕಂಠೀರವ, ತಾಯಿನಾಡು, ಜನವಾಣಿ, ಸಂಯುಕ್ತ ಕರ್ನಾಟಕ,ವಾಣಿ, ಪ್ರಜಾಮತ, ಕುಳಕುಂದ ಶಿವರಾಜರು ‘ನಿರಂಜನ’ರಾದದ್ದು, 1951ರಲ್ಲಿ. ಜ್ಞಾನ ಗಂಗೋತ್ರಿಯ ಕಿರಿಯರ ವಿಶ್ವಕೋಶ, ವಿಶ್ವಕಥಾಕೋಶ, ಇವರ ಪ್ರಧಾನ ಸಂಪಾದಕತ್ವದಲ್ಲಿ ಹೊರ ಬಂದಿರುವ ಮಹತ್ತರ ಕೃತಿಗಳು. 

ಇವರ ಹಲವಾರು ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡಿವೆ. ಚಿರಸ್ಮರಣೆ, ಮದರ್, ಕಾದಂಬರಿಗಳು ರಷ್ಯನ್ ಭಾಷೆಗೆ ಅನುವಾದಗೊಂಡಿವೆ. ಕರ್ನಾಟಕ ವಿಶ್ವವಿದ್ಯಾನಿಲಯ ಇವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದೆ. 1989ರಲ್ಲಿ ರಾಜ್ಯ ಪ್ರಶಸ್ತಿ ದೊರೆತಿದೆ. ಇವರ ಒಟ್ಟು ಕೃತಿಗಳು- ಕಾದಂಬರಿಗಳು 25, ಕಥಾ ಸಂಕಲನಗಳು9, ನಾಟಕಗಳು3, ಜೀವನ ಚರಿತ್ರೆ1, ಅಂಕಣ ಸಂಕಲನಗಳು 7, ಭಾಷಾಂತರಗಳು 10. ಇವರ ಪ್ರಮುಖ ಕೃತಿಗಳು- ಬನಶಂಕರಿ, ಅಭಯ, ದೂರದ ನಕ್ಷತ್ರ, ರಂಗಮ್ಮನ ವಠಾರ, ಕೊನೆ ನಮಸ್ಕಾರ, ವಿಲಾಸಿನಿ, ನಾಸ್ತಿಕ ಕೊಟ್ಟ ದೇವರು, ಹಿಮಾಲಯದ ದಳ್ಳುರಿ, ಅಧಃಪತನ, ಮಾನವನ ಪಾಡು, ಕಾಲಕ್ಷೇಪ, ಕಲ್ಯಾಣ ಸ್ವಾಮಿ, ಋತುರಾಜ, ಮೃತ್ಯುಂಜಯ ಮುಂತಾದವು. ಆಹ್ವಾನ ಇವರು ರಚಿಸಿರುವ ನಾಟಕ. ಇವರು ರಚಿಸಿರುವ ಸುಮಾರು 160 ಕಥೆಗಳು ಎರಡು ಭಾಗಗಳಾಗಿ ಧ್ವನಿ ಎಂಬ ಹೆಸರಿನಲ್ಲಿ 1987ರಲ್ಲಿ ಹೊರ ಬಂದಿವೆ.

ನಿರಂಜನ

(15 Jun 1924-12 Mar 1992)

Books by Author

ABOUT THE AUTHOR