
ಗ್ರೀನ್ ರೂಂ ನಾಣಿ ಅಥವಾ ಮೇಕಪ್ ನಾಣಿ ಎಂದೇ ಹೆಸರಾಗಿರುವ ನಾಣಿ ಅವರದು ಪ್ರಸಾದನ ಕ್ಷೇತ್ರದಲ್ಲಿ ಅಪಾರ ಅನುಭವ. ಭಾರತದ ವಿರಳ ಪ್ರಸಾದನ ತಜ್ಞರಲ್ಲಿ ಅವರು ಪ್ರಮುಖರು. ನಾಟಕ, ಚಲನಚಿತ್ರ ಕ್ಷೇತ್ರಗಳಲ್ಲಿರುವ ಕರ್ನಾಟಕದ ಬಹುಸಂಖ್ಯಾತ ಕಲಾವಿದರು ನಾಣಿಯವರ ಮೇಕಪ್ಪಿನಿಂದ ಮೆರುಗು ಪಡೆದವರೇ ಆಗಿದ್ದಾರೆ. ಇಂಗ್ಲೆಂಡಿನಲ್ಲಿ ಕಲಿತು ನಾಟ್ಯ ಹಾಗೂ ಪ್ರಸಾದನ ಕಲೆಗಳ ಆಳ-ಅಗಲಗಳನ್ನು ಅರಿತು ತಮ್ಮ ಜ್ಞಾನವನ್ನು ಅನುಭವದ ಮೂಸೆಯಲ್ಲಿಟ್ಟು ಇನ್ನೂ ಸಮೃದ್ಧಗೊಳಿಸಿಕೊಂಡಿರುವ ನಾಣಿ ಅವರು ಈ ಪುಸ್ತಕದಲ್ಲಿ ಪ್ರಸಾದನ ಕುರಿತು ಸುಲಲಿತವಾಗಿ ವಿವರಿಸಿದ್ದಾರೆ.
©2025 Book Brahma Private Limited.