ಕಲಿಕೆಯ ತೊಂದರೆಗಳು

Author : ಜಿ. ಪುರುಷೋತ್ತಮ

Pages 136

₹ 100.00




Year of Publication: 2010
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಕಲಿಕೆಯ ತೊಂದರೆಗಳು- ಲೇಖಕ-ವಾಕ್ ಶ್ರವಣತಜ್ಞ ಡಾ. ಜಿ. ಪುರುಷೋತ್ತಮ ಅವರು ಬರೆದ ಕೃತಿ. ಕಲಿಕೆಯ ತೊಂದರೆಗಳು ಮುಖ್ಯವಾಗಿ ಮಗು ಬೆಳೆಯುತ್ತಿರುವ ಪರಿಸರವೇ ಪ್ರಮುಖ ಕಾರಣ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಜೊತೆಗೆ, ಹೆತ್ತವರೂ ಈ ತೊಂದರೆಗೆ ಕಾರಣವಾಗುವರು. ಇದು ಹೆತ್ತವರಿಗೂ ತಿಳಿದಿರಲಾರದು. ಮಗುವಿನ ದೃಷ್ಟಿದೋಷ, ಶ್ರವಣದೋಷ, ನರಗಳ ದೋಷವೂ ಕಾರಣವಾಗಿರಬಹುದು. ಈ ತೊಂದರೆಯನ್ನು ಗುರುತಿಸುವುದು ಹೇಗೆ ? ಇದರ ಪರಿಹಾರ ಹೇಗೆ ? ಮಕ್ಕಳ ಕಲಿಕೆಯ ತೊಂದರೆಯನ್ನು ಗುರುತಿಸುವ ನಿಟ್ಟಿನಲ್ಲಿ ಹೆತ್ತವರಿಗೂ, ಶಿಕ್ಷಕರಿಗೂ ಉಪಯುಕ್ತವಾಗುವ ಕೃತಿ ಇದು.

About the Author

ಜಿ. ಪುರುಷೋತ್ತಮ

ಮೂಲತಃ ಡಾ. ಜಿ.ಪುರುಷೋತ್ತಮರು ಕಿವಿ-ಮೂಗು-ಗಂಟಲು ತಜ್ಞರು. ಬೆಂಗಳೂರಿನಲ್ಲಿ ವಾಸ. ಮೈಸೂರು ವಿಶ್ವವಿದ್ಯಾಲಯದಿಂದ ಅವರು ಮಾತು ಹಾಗೂ ಶ್ರವಣ ದೋಷ ಕುರಿತ ಶಿಕ್ಷಣದಲ್ಲಿ ಬಿಎಸ್ ಸಿ ಪದವಿ (1974) ಹಾಗೂ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (1977) ಪಡೆದರು. ಕಿವುಡು ಮಗು ಮಾತಾಡಬಲ್ಲದು ಎಂಬ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ. ...

READ MORE

Related Books