ಶಾಲೆಯಲ್ಲಿ ಹಿಂದುಳಿಯುವಿಕೆ

Author : ಜಿ. ಪುರುಷೋತ್ತಮ

Pages 48

₹ 40.00




Year of Publication: 2013
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ ಬಳಿ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

`ಶಾಲೆಯಲ್ಲಿ ಹಿಂದುಳಿಯುವಿಕೆ'  ವಾಕ್-ಶ್ರವಣ ದೋಷ ತಜ್ಞ ಡಾ. ಜಿ. ಪುರುಷೋತ್ತಮ ಅವರ ಕೃತಿ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಾರೆ. ಇವರಿಗೆ ವಿಶೇಷ ಶಿಕ್ಷಣದ ಅಗತ್ಯವಿರುತ್ತದೆ. ಇಂತಹ ಮಕ್ಕಳನ್ನು ಗುರುತಿಸುವುದು ಶಿಕ್ಷಕರ ಹೊಣೆಗಾರಿಕೆ ಆಗಿರುತ್ತದೆ. ಮಕ್ಕಳ ಈ ತೊಂದರೆಗೆ ವಂಶವಾಹಿನಿಯ ಇಲ್ಲವೇ ಪರಿಸರದ ಕಾರಣಗಳು ಇರುತ್ತವೆ. ಮಕ್ಕಳ ಕಲಿಕೆಯ ತೊಂದರೆಗಳ ದೋಷ ಪಂಚೇಂದ್ರಿಯಗಳಲ್ಲಿ ಇದೆಯೋ ಅಥವಾ ಪರಿಸರದಲ್ಲಿದೆಯೋ ಎಂಬ ಕಾರಣವನ್ನು ಕೆಲವು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಬಹುದು. ಈ ತೊಂದರೆ ಕಾಣಿಸಿಕೊಳ್ಳಲು ಪಾಲಕರು ಮಕ್ಕಳನ್ನು ಬೆಳೆಸುವ ರೀತಿಯೂ ಕಾರಣವಾಗಿರುತ್ತದೆ. ಇಂತಹ ಸಂಗತಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಕೃತಿ ಇದು.

About the Author

ಜಿ. ಪುರುಷೋತ್ತಮ

ಮೂಲತಃ ಡಾ. ಜಿ.ಪುರುಷೋತ್ತಮರು ಕಿವಿ-ಮೂಗು-ಗಂಟಲು ತಜ್ಞರು. ಬೆಂಗಳೂರಿನಲ್ಲಿ ವಾಸ. ಮೈಸೂರು ವಿಶ್ವವಿದ್ಯಾಲಯದಿಂದ ಅವರು ಮಾತು ಹಾಗೂ ಶ್ರವಣ ದೋಷ ಕುರಿತ ಶಿಕ್ಷಣದಲ್ಲಿ ಬಿಎಸ್ ಸಿ ಪದವಿ (1974) ಹಾಗೂ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (1977) ಪಡೆದರು. ಕಿವುಡು ಮಗು ಮಾತಾಡಬಲ್ಲದು ಎಂಬ ಕೃತಿಗೆ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ‘ಕುವೆಂಪು ವೈದ್ಯಸಾಹಿತ್ಯ ಪ್ರಶಸ್ತಿ’ (2008) ಲಭಿಸಿದೆ. ...

READ MORE

Related Books