ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ

Author : ಶ್ವೇತಾ ಕಿಶೋರ ನರಗುಂದ

Pages 88

₹ 50.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080-22203580

Synopsys

‘ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ’ ಕೃತಿಯು ಶ್ವೇತಾ ನರಗುಂದ ಅವರ ಬಂಜೆತನದ ಅರಿವು ಮೂಡಿಸುವ ಲೇಖನಸಂಕಲನವಾಗಿದೆ. ಇದುವರೆಗೂ ಮಕ್ಕಳಾಗದಿರಲು ಸ್ತ್ರೀಯೆ ಕಾರಣವೆಂದು ದೂಷಿಸಿ ಬಂಜೆಪಟ್ಟವನ್ನು ಸಮಾಜ ಆಕೆಗೇ ಆರೋಪಿಸಿತ್ತು. ಸಂತಾನಹೀನತೆ ಎಂದರೇನು? ಅದು ಹೆಣ್ಣಿಗೆ ಮಾತ್ರ ಅಂಟಿದ ಶಾಪವೇ? ಅದು ಪುರುಷರಲ್ಲೂ ಇರಲು ಸಾಧ್ಯವೆ? ಪ್ರಜನನಾಂಗಗಳು ಸುಸ್ಥಿತಿಯಲ್ಲಿದ್ದರೂ ಯಾಕೆ ಮಗು ಜನಿಸುತ್ತಿಲ್? ಈ ಪ್ರಶ್ನೆಗಳಿಗೆಲ್ಲ ಇಂದಿನ ಆಧುನಿಕ ವೈದ್ಯವಿಜ್ಞಾನ ಉತ್ತರ ನೀಡಲು ಸಮರ್ಥವಾಗಿದೆ. ಮಾತ್ರವಲ್ಲ ಸ್ತ್ರೀ-ಪುರುಷರಲ್ಲಿ ದೋಷ ಯಾರಲ್ಲಿದೆಯೆಂದು ಪತ್ತೆಹಚ್ಚಿ, ಸಹಜ ಫಲವಂತಿಕೆಗೆ ಅಡಚಣೆಯಾಗಿರುವ ಅಂಶವನ್ನು ನಿವಾರಿಸಲೂ ಶಕ್ತವಾಗಿದೆ. ಹೀಗೆ ವೈದ್ಯಕೀಯ ನೆರವು ಪಡೆದು ದಂಪತಿಗಳು ತಮ್ಮದೇ ಮಗುವನ್ನು ಪಡೆಯುವ ವಿಧಾನವನ್ನು ಈ ಪುಸ್ತಕದಲ್ಲಿ ವಿವರಿಸಿದೆ. ಗರ್ಭಾಶಯದಲ್ಲಿನ ದೋಷ, ನಪುಂಸಕತೆ, ಪ್ರನಾಳದಲ್ಲಿ ಫಲಿತಗೊಳಿಸಿ ಮತ್ತೆ ಗರ್ಭಾಶಯಕ್ಕೆ ವರ್ಗಾಯಿಸುವ ವಿಧಾನ, ಬದಲಿ ತಾಯಿ ವ್ಯವಸ್ಥೆ- ಮುಂತಾದ ವೈದ್ಯವಿಜ್ಞಾನದ ಅದ್ಭುತ ಸಾಧನೆಗಳನ್ನು ಲೇಖಕಿ ಇಲ್ಲಿ ವಿವರವಾಗಿ ತಿಳಿಸಿದ್ದಾರೆ.

About the Author

ಶ್ವೇತಾ ಕಿಶೋರ ನರಗುಂದ
(01 February 1954)

ಲೇಖಕಿ ಶ್ವೇತಾ ಕಿಶೋರ ನರಗುಂದ ಅವರು 01-02-1954 ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಂ. ಎಸ್ಸಿ (ಹಾಸ್ಪಿಟಲ್ ಮ್ಯಾನೇಜ್‌ಮೆಂಟ್) ಪದವೀಧರರು. ತಂದೆ - ಚಿದಂಬರ ಜೋಶಿ, ತಾಯಿ - ಲಲಿತಾ ಜೋಶಿ. ಕೃತಿಗಳು: ಕಾತ್ಯಾಯನೀ ಅಮ್ಮನೂ ವೇಲು ಪಕ್ಷಿಯೂ (ಸಣ್ಣಕತೆ), ಹೇಮಗರ್ಭಾ, ಕಿಂಕಿಣಿ (ಕಾವ್ಯ), ತರರಂ ಪಂಪಂ (ಮಕ್ಕಳ ಕಾವ್ಯ) .  ಪ್ರಶಸ್ತಿ-ಗೌರವಗಳು: ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ, ಸುವರ್ಣ ಕರ್ನಾಟಕ ಪ್ರಶಸ್ತಿ(ಕಾಸರಗೋಡು ಸಾಹಿತ್ಯ ಪ್ರತಿಷ್ಠಾನ), ಸಿರಿಗನ್ನಡ ಪ್ರಶಸ್ತಿ (ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ) ಮುಂತಾದ ಪ್ರಶಸ್ತಿ-ಗೌರವಗಳು ಸಂದಿದೆ. ...

READ MORE

Reviews

(ಹೊಸತು, ಜುಲೈ 2012, ಪುಸ್ತಕದ ಪರಿಚಯ)

ಮಗುವೊಂದು ಮನೆಯಲ್ಲಿ ಜನಿಸಿದರೆ ಆ ಸಂಭ್ರಮ ಹೇಳತೀರದು. ಮನುಷ್ಯ ಅಷ್ಟೇ ಅಲ್ಲ, ಸಕಲ ಜೀವಿಗಳೂ ತಮ್ಮ ಸಂತಾನವನ್ನು ಪ್ರೀತಿಸಿ ಕಾಪಾಡುತ್ತವೆ. ಆದರೂ ಅದೆಷ್ಟೋ ದಂಪತಿಗಳಿಗೆ ಸಕಲ ಸೌಭಾಗ್ಯಗಳಿದ್ದರೂ ಮಕ್ಕಳಿಲ್ಲದ ಕೊರತೆಯೊಂದು ಸದಾ ಕಾಡುತ್ತದೆ. ಇದುವರೆಗೂ ಮಕ್ಕಳಾಗದಿರಲು ಸ್ತ್ರೀಯೆ ಕಾರಣವೆಂದು ದೂಷಿಸಿ ಬಂಜೆಪಟ್ಟವನ್ನು ಸಮಾಜ ಆಕೆಗೇ ಆರೋಪಿಸಿತ್ತು. ಸಂತಾನಹೀನತೆ ಎಂದರೇನು ? ಅದು ಹೆಣ್ಣಿಗೆ ಮಾತ್ರ ಅಂಟಿದ ಶಾಪವೇ ? ಅದು ಪುರುಷರಲ್ಲೂ ಇರಲು ಸಾಧ್ಯವೆ ? ಪ್ರಜನನಾಂಗಗಳು ಸುಸ್ಥಿತಿಯಲ್ಲಿದ್ದರೂ ಯಾಕೆ ಮಗು ಜನಿಸುತ್ತಿಲ್ಲ? ಈ ಪ್ರಶ್ನೆಗಳಿಗೆಲ್ಲ ಇಂದಿನ ಆಧುನಿಕ ವೈದ್ಯವಿಜ್ಞಾನ ಉತ್ತರ ನೀಡಲು ಸಮರ್ಥವಾಗಿದೆ. ಮಾತ್ರವಲ್ಲ ಸ್ತ್ರೀ-ಪುರುಷರಲ್ಲಿ ದೋಷ ಯಾರಲ್ಲಿದೆಯೆಂದು ಪತ್ತೆಹಚ್ಚಿ, ಸಹಜ ಫಲವಂತಿಕೆಗೆ ಅಡಚಣೆಯಾಗಿರುವ ಅಂಶವನ್ನು ನಿವಾರಿಸಲೂ ಶಕ್ತವಾಗಿದೆ. ಹೀಗೆ ವೈದ್ಯಕೀಯ ನೆರವು ಪಡೆದು ದಂಪತಿಗಳು ತಮ್ಮದೇ ಮಗುವನ್ನು ಪಡೆಯುವ ವಿಧಾನವನ್ನು ಈ ಪುಸ್ತಕದಲ್ಲಿ ವಿವರಿಸಿದೆ. ಗರ್ಭಾಶಯದಲ್ಲಿನ ದೋಷ, ನಪುಂಸಕತೆ, ಪ್ರನಾಳದಲ್ಲಿ ಫಲಿತಗೊಳಿಸಿ ಮತ್ತೆ ಗರ್ಭಾಶಯಕ್ಕೆ ವರ್ಗಾಯಿಸುವ ವಿಧಾನ, ಬದಲಿ ತಾಯಿ ವ್ಯವಸ್ಥೆ- ಮುಂತಾದ ವೈದ್ಯವಿಜ್ಞಾನದ ಅದ್ಭುತ ಸಾಧನೆಗಳನ್ನು ಶ್ವೇತಾ ನರಗುಂದ ಇಲ್ಲಿ ವಿವರವಾಗಿ ತಿಳಿಸಿದ್ದಾರೆ. ಲೇಖಕಿ ಪ್ರಾಣಿಶಾಸ್ತ್ರದಲ್ಲಿ ಎಂ.ಎಸ್‌ಸಿ. ಪದವೀಧರೆ. ಆಸ್ಪತ್ರೆ ನಿರ್ವಹಣೆಯಲ್ಲಿ ಅಪಾರ ಅನುಭವಸ್ಥರು.

Related Books