ನಮ್ಮ ಗಾದೆಗಳು

Author : ರಾಮೇಗೌಡ (ರಾಗೌ)

Pages 210

₹ 126.00




Year of Publication: 2011
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು-4

Synopsys

ಲೇಖಕ ರಾಮೇಗೌಡ (ರಾಗೌ) ಅವರು ಬರೆದ ಕೃತಿ-ನಮ್ಮ ಗಾದೆಗಳು. ಬದುಕಿನ ದಟ್ಟ ಅನುಭವವನ್ನು ಕಟ್ಟಿಕೊಡುತ್ತವೆ-ಗಾದೆಗಳು. ಮಾತ್ರವಲ್ಲ; ಸಂಸ್ಕೃತಿ, ಸಮಾಜ, ಭಾಷೆ, ವಿವೇಕಪೂರ್ಣತೆ, ಸಾಮಾಜಿಕ ಚರಿತ್ರೆ ಹೀಗೆ ಗಾದೆಗಳು ಒಟ್ಟಾರೆ ಬದುಕಿನ ಚಿತ್ರಣವಾಗಿರುತ್ತವೆ. ಗಾತ್ರದಲ್ಲಿ ಕಿರಿದಾಗಿದ್ದರೂ ಹಿರಿದಾದ ಅರ್ಥವನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರುತ್ತವೆ. ಬಹುತೇಕ ವೇಳೆ ಇವು ಸಂದೇಶ ರೂಪಗಳಾಗಿಯೂ ಇರುತ್ತವೆ. ಬದುಕಿಗೆ ದಿಕ್ಸೂಚಿಯಾಗಿಯೂ, ಸಮಯೋಚಿತ ಜ್ಞಾನ ನೀಡುವ ವಿವೇಚಿತ ಬೆಳಕಾಗಿಯೂ ಇರುತ್ತವೆ. ಇಂತಹ ಗಾದೆಗಳ ವಿಶ್ಲೇಷಣೆ ಇಲ್ಲಿದೆ.

About the Author

ರಾಮೇಗೌಡ (ರಾಗೌ)

ಜಾನಪದ ವಿದ್ವಾಂಸ ಡಾ. ರಾಮೇಗೌಡ (ರಾಗೌ) ಅವರು ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕರು ಕೂಡ. ಯಾತ್ರೆ, ತೆಪ್ಪ, ಮೋಡ ಮುಸುಕಿದ ಆಕಾಶ, ನೆಲದ ಮರೆಯ ನಿಧಾನ, ಮಾತು ಮೌನಗಳ ನಡುವೆ, ಆರದಿರಲಿ ಈ ಬೆಳಕು, ಮಾತು ಮಾರ್ಗ, ನಿನ್ನೆ ನಾಳೆಗಳ ನಡುವೆ (ಸಮಗ್ರ) ಅವರ ಪ್ರಕಟಿತ ಕವನ ಸಂಕಲನಗಳು. ದೊರೆ ದುರ್ಯೋಧನ (ನಾಟಕ) ಮತ್ತು ಕುಮಾರ ರಾಮ, ಕಂದನ ಕವನಗಳು, ಆರು ಪ್ರಾಣಿಕಥೆಗಳು (ಮಕ್ಕಳ ಸಾಹಿತ್ಯ) ಕೃತಿಗಳನ್ನು ಪ್ರಕಟಿಸಿದ್ದಾರೆ.  ರಾಘವಾಂಕ, ಕಾವ್ಯಾನುಶೀಲನ, ಅವಗಾಹನ, ಕುವೆಂಪು ಸಾಹಿತ್ಯ ವಿಮರ್ಶನ, ದುರ್ಗಸಿಂಹ, ಪ್ರಾಸ್ತಾವಿಕ(ವಿಮರ್ಶೆ) , ಲಕ್ಷೀಶನ ಕಾವ್ಯ ಪ್ರವೇಶ, ರನ್ನನ ಕಾವ್ಯಾಧ್ಯಯನ (ಸಂಶೋಧನ ಕೃತಿಗಳು)   ಕೆ.ಎಸ್.ನರಸಿಂಹಸ್ವಾಮಿ (ಜೀವನ ಚರಿತ್ರೆ),  ಸಾಹಸ , ಭೀಮವಿಜಯ, ಅಜಿತತೀರ್ಥಂಕರ ಪುರಾಣ, ಲಕ್ಷ್ಮೀಶನ ಜೈಮಿನಿ ಭಾರತ (ಗ್ರಂಥಸಂಪಾದನೆ) ಮತ್ತು ನಮ್ಮ ಗಾದೆಗಳು, ಕಿಟ್ಟೆಲ್ ಕೋಶದ ಗಾದೆಗಳು, ಕರ್ಣಾಟಕದ ಜನಪದ ಕಥೆಗಳು, ನಮ್ಮ ...

READ MORE

Related Books