ತಗಾದೆ ಬೇಡ ಗಾದೆ ನೋಡ

Author : ಶ್ರೀವಲ್ಲಿ ಮಂಜುನಾಥ

Pages 204

₹ 225.00




Year of Publication: 2023
Published by: ಅಚಲ ಪ್ರಕಾಶನ
Address: # 10 ನೆಲಮಹಡಿ, 2ನೇ ಮುಖ್ಯರಸ್ತೆ, ವಜರಾಹಳ್ಳಿ, ಭೈರವೇಶ್ವರ ಬಡಾವಣೆ, ನೆಲಮಂಗಲ, ಬೆಂಗಳೂರು- 562123
Phone: 9916595916

Synopsys

‘ತಗಾದೆ ಬೇಡ ಗಾದೆ ನೋಡ ’ಶ್ರೀ ವಲ್ಲಿ ಮಂಜುನಾಥ ಅವರ ಕೃತಿಯಾಗಿದೆ. ಬದುಕಿಗೊಂದೆಚ್ಚರಿಕೆ ಕೊಡುವ ನುಡಿಮುತ್ತುಗಳೆ | ವೇದದೊಳು ಗೀತೆಯೊಳು ವಚನಗ್ರಂಥದೊಳು || ಅದುವೆ ನಿನ್ನಯ ಸ್ವಂತ ಅನುಭವದಿ ಹೊಮ್ಮಿರಲು ಗಾದೆಗಳ ಸುರಿಮಳೆಯೊ - ನವ್ಯಜೀವಿ ಅನುಭವದ ಮೂಸೆಯಿಂದ ಹೊರಹೊಮ್ಮುತ್ತ ಜನರ ನಿತ್ಯಜೀವನಕ್ಕೆ ಬೆಳಕಾಗುವ ಆಡುಭಾಷೆಯ ಸರಳ ಪದಪುಂಜಗಳೇ - ಗಾದೆಗಳು ! ಅವುಗಳ ಸುರಿಮಳೆ ಈ ಕೃತಿಯಲ್ಲಿದೆ. ಗಾದೆಗಳಿಗೂ ಅರ್ಥವಿವರಣೆ ಬೇಕೆ ಎನ್ನುವ ಮುನ್ನ, ನಿಮಗೆ ಗೊತ್ತಿರುವ ಎಲ್ಲ ಗಾದೆಗಳ ಸರಿಯಾದ ಅರ್ಥವನ್ನು ಮನಸ್ಸಿನಲ್ಲಿ ತಂದುಕೊಳ್ಳಿ, ಹೌದು, ಬೇಕು ಎನ್ನಿಸಿತು. ಇಲ್ಲಿ ಆ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ಅತ್ಯಂತ ಸೊಗಸಾಗಿ ಆತ್ಮೀಯರಾದ ಶ್ರೀವಲ್ಲಿ ಮಂಜುನಾಥ್ ಅವರು ನಮ್ಮೆಲ್ಲರಿಗಾಗಿ ಕಟ್ಟಿಕೊಟ್ಟಿದ್ದಾರೆ. ಗಾದೆಗಳ ಸಾಲುಗಳಿಗೆ ತಮ್ಮದೇ ಅನುಭವದ ಮುತ್ತನ್ನಿಟ್ಟು, ಪರ್ಯಾಯವಾದ ಇನ್ನಿತರ ಗಾದೆಗಳನ್ನು ಪೋಣಿಸಿ, ಪೂರಕವಾಗುವ ಕತೆಗಳನ್ನೂ ಮನೋಜ್ಞವಾಗಿ ಹೆಣೆದು, ಎಲ್ಲರಿಗೂ ಎಲ್ಲ ಕಾಲಕ್ಕೂ ಮಾರ್ಗದರ್ಶಿಯಾಗಬಲ್ಲ ಅರಿವಿನ ಹಾರವೊಂದನ್ನು ಸೃಜಿಸಿದ್ದಾರೆ. ಎನ್ನುತ್ತಾರೆ ಸತ್ಯೇಶ್‌ ಎನ್. ಬೆಳ್ಳೂ‌ರು.

About the Author

ಶ್ರೀವಲ್ಲಿ ಮಂಜುನಾಥ
(08 April 1967)

ಸದ್ಯ ಬೆಂಗಳೂರು ನಿವಾಸಿ ಆಗಿರುವ ಶ್ರೀವಲ್ಲಿ ಮಂಜುನಾಥ ಅವರು ಹಲವು ಲೇಖನಗಳನ್ನು ಬರೆದಿದ್ದಾರೆ. ತುಷಾರ, ತರಂಗ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಬರೆಹಗಳು ಪ್ರಕಟವಾಗಿವೆ. ಅವರು ಸುಪ್ತಸಾಗರ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ...

READ MORE

Related Books