ನಿನಗೆ ನೀ ಬೆಳಕಾಗು

Author : ಎಂ.ಎಸ್. ರುದ್ರೇಶ್ವರಸ್ವಾಮಿ

Pages 388

₹ 350.00




Year of Publication: 2016
Published by: ಓಶೋ ಇನ್ ಕರ್ನಾಟಕ,
Address: ಬೆಂಗಳೂರು

Synopsys

ಅಧ್ಯಾತ್ಮಕಿತ ಗುರು ಎಂದೇ ಖ್ಯಾತಿಯ ಓಶೋ ಅವರು ಝೆನ್ ಕಥೆಗಳನ್ನು ಕುರಿತು ಇಂಗ್ಲಿಷಿನಲ್ಲಿ ನೀಡಿರುವ ಉಪನ್ಯಾಸಗಳನ್ನು‘ದೇವದಾರು ಮರಗಳಲ್ಲಿ ನಾದಲೀಲೆ’ ಎಂಬ ಉಪಶೀರ್ಷಿಕೆಯಡಿ ಲೇಖಕ ಎಂ.ಎಸ್. ರುದ್ರೇಶ್ವರಸ್ವಾಮಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಝನ್ ಕಥೆಗಳು ತಮ್ಮ ಒಡುಪು, ಒಗಟು ಅಥವಾ ಬೆಡಗಿನ ಸ್ವರೂಪ-ಸ್ವಭಾವಗಳಿಂದ ತುಂಬಿವೆ. ಅವುಗಳ ಅರ್ಥ, ಬದುಕಿನಲ್ಲಿಯ ಅನ್ವಯತೆಯ ನಿಯಮಗಳನ್ನು ತಿಳಿಸಿ, ನಿನಗೆ ನೀನೇ ಬೆಳಕಾಗು ಎಂಬರ್ಥದಲ್ಲಿ ಅರಿವೇ ಗುರು ಎಂಬ ಬೀಜಮಂತ್ರದ ಮಹತ್ವವನ್ನು ತಿಳಿಸಿದ್ದಾರೆ.

About the Author

ಎಂ.ಎಸ್. ರುದ್ರೇಶ್ವರಸ್ವಾಮಿ

ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರು ಮೂಲತಃ ದಾವಣಗೆರೆಯವರು. ಮೈಸೂರು ವಿ.ವಿಯಿಂದ ಸ್ನಾತಕೋತ್ತರ ಪದವೀಧರರು. ಅಂಚೆ ಇಲಾಖೆಯಲ್ಲಿ ಸಲ್ಲಿಸಿದ ಸೇವಾ ರೀತಿಗೆ ಡಾಕ್ ಸೇವಾ ಪ್ರಶಸ್ತಿ ಪುರಸ್ಕೃತರು. ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಸ್ವಯಂನಿವೃತ್ತಿ(2009)  ಪಡೆದಿದ್ದಾರೆ.  ಅವರ ಮೊದಲ ಕವನ ಸಂಗ್ರಹ ‘ಪ್ರೀತಿ ಮತ್ತು ನೀರು’ಗೆ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್ ಪ್ರಶಸ್ತಿ, ಎರಡನೇ ಕವನ ಸಂಗ್ರಹ ‘ಆ ತೀರದ ಮೋಹ’ಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ ಮತ್ತು ಶೂದ್ರ ಪತ್ರಿಕೆ ನೀಡುವ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿಗಳು ಹಾಗೂ ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ...

READ MORE

Related Books