ಸಮಾಜವಾದಿ ಹೋರಾಟಗಾರರ ಸಂದರ್ಶನ : ಸಂಪುಟ 2

Author : ಬಿ. ಪೀರ್ ಬಾಷ

Pages 326

₹ 120.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ರಾಮಮನೋಹರ ಲೋಹಿಯ ಅವರ ನೇರ ಸಂಪರ್ಕವಿದ್ದ ಸಮಾಜವಾದಿ ಚಳವಳಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದ ಮತ್ತು ಈಗಲೂ ಲೋಹಿಯಾ ಚಿಂತನೆಗಳನ್ನು ತಮ್ಮ ಬದುಕಿನಲ್ಲಿ ಜೀವಂತವಾಗಿ ಇಟ್ಟುಕೊಂಡಿರುವ, ಲೌಕಿಕ ಆಸೆಗಳಿಂದ ದೂರವಿರುವ ೮ ಮಂದಿ ಹಿರಿಯರನ್ನು ಸಂದರ್ಶಿಸಿ ಈ ಸಂಪುಟವನ್ನು ಸಿದ್ದಪಡಿಸಲಾಗಿದೆ. ಇಲ್ಲಿನ ಸಂದರ್ಶನಗಳು ವಿಶಿಷ್ಟತೆಯೆಂದರೆ, ಇಲ್ಲಿ ಬರುವ ನಿರ್ದಿಷ್ಟ ವ್ಯಕ್ತಿಯ ಅಥವಾ ಪಕ್ಷದ ಕತೆಯು ಹಲವು ವ್ಯಕ್ತಿಗಳ ಹಲವು ಪಕ್ಷಗಳ ಕಥೆಯಾಗಿ ಸಂಕೀರ್ಣವಾಗಿ ಹಣೆದುಕೊಳ್ಳುವುದು. ಈ ಅರ್ಥದಲ್ಲಿ ಇದು ಭಾರತದ ರಾಜಕಾರಣ, ಚಳುವಳಿ ಹೋರಾಟಗಾರ ಪರಿಮಿತಿ ಹಾಗೂ ಸಾಧನೆಗಳನ್ನು ಸಾದರಪಡಿಸುವ ಕೃತಿಯಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಆ ಒಂದು ದೃಢ ಹೆಜ್ಜೆ ಸಾಕು ನನಗೆ , ಸಾವರ್ಕರ್ ತಲೆಗೆ ರೆಡ್‌ಕ್ಯಾಪ್ ಹಾಕಿದ್ದ , ಮಠ ಅಂದ್ರೆ ಸೋಷಲಿಸ್ಟ್ ಪಾರ್ಟಿನೆ , ಕಿಸೆರೊಕ್ಕ ರೊಟ್ಟಿ,ಭಿಕ್ಷಾ, ಒಂಟಿ ಕಂಬದ ಡೇರೆ , ಸಮಾಜವಾದಿಗಳು ವಿದೇಶಿ ಕಾರುಗಳಲ್ಲಿ ,ಪಾರ್ಲಿಮೆಂಟರಿಗಿನ ಬೆಟರ್ ಸಿಸ್ಟಂ ಇಲ್ಲ , ಗಾಂಧೀ ಸತ್ತಾಗ ಅವ್ರು ಪೇಡ ತಿಂದ್ರು , ಸಂಘರ್ಷ ಯಾಕೆ ಬೇಕು ಅಂದ್ರೆ.

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books