ಸಂಜೀವಿನಿ

Author : ಸಂಜೋತಾ ಪುರೋಹಿತ

₹ 200.00
Year of Publication: 2018
Published by: ಪ್ರಗತಿ ಗ್ರಾಫಿಕ್ಸ್

Synopsys

ಸಂಜೋತಾ ಪುರೋಹಿತ ಅವರ ಕಾದಂಬರಿ ‘ಸಂಜೀವಿನಿ’. ಪ್ರತಿಲಿಪಿ ಸೇರಿದಂತೆ ಹಲವು ಅಂತರ್ಜಾಲ ವೇದಿಕೆಗಳಲ್ಲಿ ಪ್ರಕಟವಾದ ಬರಹಗಳನ್ನು ಒಗ್ಗೂಡಿಸಿ ಪುಸ್ತಕ ರೂಪದಲ್ಲಿ ತಂದ ಕಾದಂಬರಿ ಇದಾಗಿದೆ. ಸಂಜೀವಿನಿ ಕಾದಂಬರಿಯು ಒಂದು ಅಮೋಘ ಪ್ರೇಮಕಥೆಯುಳ್ಳ ಕೃತಿ. ಅದರಲ್ಲೂ ಬಹುತೇಕ ಲೇಖಕಿಯ ಸ್ವಂತ ಕಥೆಯಿದ್ದು ಕೆಲವು ಕಡೆ ಕಾದಂಬರಿಗೆ ಇನ್ನಷ್ಟು ಮೆರಗು ನೀಡುವ ದೃಷ್ಟಿಯಿಂದ ಕಾಲ್ಪನಿಕ ಸನ್ನಿವೇಶಗಳನ್ನು ಸೇರಿಸಿ ಕಥೆ ಹೆಣೆದಿದ್ದಾರೆ. ಕಥಾನಾಯಕಿ ಪುನರ್ವಸು ಳ ಸೋದರಮಾವನ ಮನೆ ಗೃಹಪ್ರವೇಶ ಸಮಾರಂಭದಿಂದ ಪ್ರಾರಂಭವಾಗುವ ಕಥೆಯು ಅನೇಕ ತಿರುವುಗಳೊಂದಿಗೆ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಹುಟ್ಟುವ ಪ್ರೀತಿ, ಮನಸ್ಸಿನ ತಾಕಲಾಟಗಳು, ಪ್ರೇಮಿಯನ್ನು ಪಡೆಯುವ ಉತ್ಕಟತೆ, ಹಾಸ್ಟೆಲ್ ಜೀವನ, ಸ್ನೇಹಿತೆಯರ ಒಡನಾಟ, ರಂಗು ರಂಗಾದ ವಿದ್ಯಾರ್ಥಿ ಜೀವನ, ಭವಿಷ್ಯದ ಚಿಂತನೆ, ಎಲ್ಲವನ್ನೂ ಲೇಖಕಿ ಬಹಳ ನವಿರಾಗಿ ನಿರೂಪಣೆ ಮಾಡಿದ್ದಾರೆ. ಓದುಗರಿಗೆ ಒಂದೊಂದು ಪುಟ ತಿರುವಿದಂತೆ ತಮ್ಮದೇ ಕಥೆಯೇನೊ ಪಾತ್ರಗಳಲ್ಲಿ ತಾವೇ ಇದ್ದೇವೆಯೊ ಏನೊ ಎಂಬಂತೆ ಅನಿಸುತ್ತದೆ.

About the Author

ಸಂಜೋತಾ ಪುರೋಹಿತ

ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾ ದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು.ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದ ಅಂತರ್ಜಾಲ ಪತ್ರಿಕೆಯಲ್ಲಿ “ಹುಲ್ಲಾಗು ಬೆಟ್ಟದಡಿ” ಎನ್ನುವ ಅಂಕಣ ಬರಹವನ್ನು ಕೂಡ ಬರೆದು ಸೈ ಎನಿಸಿಕೊಂಡಿದ್ದಾರೆ. ಪ್ರತಿವರ್ಷ ಅಮೇರಿಕನ್ನಡಿಗರೊಂದಿಗೆ ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಇವರು ತಮ್ಮ ಕನ್ನಡ ಪ್ರೀತಿಯಿಂದ ಮನ ಗೆಲ್ಲುತ್ತಾರೆ. ಕೆಲ ದಿನಗಳ ಹಿಂದೆ ಏರ್ಪಡಿಸಲಾಗಿದ್ದ “ನಾವಿಕ ಕಥಾಸ್ಪರ್ಧೆ” ಯಲ್ಲಿ ತೀರ್ಪುಗಾರರ ತಂಡದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹಾದಿಗೆ ತಮ್ಮನ್ನು ತೆರೆದುಕೊಂಡಿರುವುದು ಅಭಿನಂದನಾರ್ಹ. ಕೃತಿಗಳು: ಸಂಜೀವಿನಿ ...

READ MORE

Related Books