ಸೊಳ್ಳೆಗಳು ಹರಡುವ ರೋಗಗಳು

Author : ಕರವೀರಪ್ರಭು ಕ್ಯಾಲಕೊಂಡ

₹ 50.00




Published by: ನವಕರ್ನಾಟಕ ಪಬ್ಲಿಕೇಷನ್ಸ್‌
Address: ಬನ್ನೇರಘಟ್ಟ ರಸ್ತೆ, ಬೆಂಗಳೂರು- 560076

Synopsys

ಲೇಖಕ ಡಾ. ಕರಿವೀರಪ್ರಭು ಕ್ಯಾಲಕೊಂಡ ಅವರ ಲೇಖನ ಕೃತಿ ʻಸೊಳ್ಳೆಗಳು ಹರಡುವ ರೋಗಗಳುʼ. “ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು. ಅದರ ಕಾಟದಿಂದ ತಪ್ಪಿಸಿಕೊಂಡು ಆರೋಗ್ಯವಾಗಿರಲು ಏನೆಲ್ಲ ಮಾರ್ಗೋಪಾಯಗಳನ್ನು ಕಂಡುಕೊಂಡರೂ, ಸೊಳ್ಳೆ ಮುಕ್ತ ಪರಿಸರದ ನಿರ್ಮಾಣದಲ್ಲಿ ಅವನು ಸೋತಿದ್ದಾನೆಂದೇ ಹೇಳಬಹುದು. ಮಲೇರಿಯಾ, ಫೈಲೇರಿಯಾ, ಡೆಂಗುಜ್ವರ, ಮಿದುಳುಜ್ವರ, ಹಳದಿಜ್ವರ ಇತ್ಯಾದಿ ಕಾಯಿಲೆಗಳು 'ಹೋದೆಯ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ' ಅನ್ನುವಂತೆ ಬಿಡದೆ ಕಾಡುತ್ತಿವೆ. ಇದಕ್ಕೆ ಕಾರಣ ಸೊಳ್ಳೆಗಳೇ ಆದರೂ ಅವುಗಳ ಪ್ರಮುಖ ವಾಸಸ್ಥಾನವಾದ ಕೊಳಚೆ ಪ್ರದೇಶಗಳ ನಿರ್ಮೂಲನದಲ್ಲಿ ಮಾನವ ಹಿಂದೆ ಬಿದ್ದಿದ್ದಾನೆ. ಹಾಗಾಗಿ ಸೊಳ್ಳೆಗಳ ಸಂತತಿ ಹೆಚ್ಚುತ್ತಿದೆ. ರೋಗಗಳೂ ಹೆಚ್ಚುತ್ತಿವೆ. ಸೊಳ್ಳೆಗಳಿಂದ ಹರಡುವ ರೋಗಗಳಾವುವು ? ಅವುಗಳಿಗೆ ಚಿಕಿತ್ಸಾ ಪರಿಹಾರವೇನು ? ಅವುಗಳ ನಿಯಂತ್ರಣಕ್ಕೆ ಅನುಸರಿಸಬಹುದಾದ ಮಾರ್ಗೋಪಾಯಗಳಾವುವು ? ಇತ್ಯಾದಿಗಳ ಬಗ್ಗೆ, ಮಕ್ಕಳ ರೋಗ ತಜ್ಞರು ಹಾಗೂ ಶಸ್ತ್ರಚಿಕಿತ್ಸಕರಾಗಿರುವ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು ಇಲ್ಲಿ ಚರ್ಚಿಸಿದ್ದಾರೆ.” 

About the Author

ಕರವೀರಪ್ರಭು ಕ್ಯಾಲಕೊಂಡ

ಲೇಖಕ, ಕವಿ ಹಾಗೂ ವೈದ್ಯರಾದ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು (ಶಸ್ತ್ರಚಿಕಿತ್ಸರು ಹಾಗೂ ಮಕ್ಕಳ ತಜ್ಞರು) ಬಾಗಲಕೋಟೆ ಜಿಲ್ಲೆಯ ಬಾದಾಮಿಯವರು.  ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ 40 ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 2016ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ. ಪ್ರಶಸ್ತಿ-ಗೌರವಗಳು: ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ,  ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ,, ಬೆಸ್ಟ್‌ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ...

READ MORE

Related Books