ಉತ್ತರ ಕರ್ನಾಟಕದ ಸೂಫಿ ಸಂತರು

Author : ಫಕೀರ್ ಮುಹಮ್ಮದ್ ಕಟ್ಪಾಡಿ

Pages 279

₹ 293.00




Year of Publication: 2017
Published by: ನ್ಯಾಷನಲ್ ಬುಕ್ ಟ್ರಸ್ಟ್  ಆಫ್ ಇಂಡಿಯಾ 
Address: ನವದೆಹಲಿ

Synopsys

ಹಿರಿಯ ಲೇಖಕ-ಚಿಂತಕ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕೃತಿ-ಉತ್ತರ ಕರ್ನಾಟಕದ ಸೂಫಿ ಸಂತರು. ಉತ್ತರ ಕರ್ನಾಟಕ ಪ್ರದೇಶವು ಸೂಫಿ ಸಂತರ ಹಾಗೂ ಶರಣರ ನೆಲೆವೀಡು. ಮಾತ್ರವಲ್ಲ; ದಾಸರ ಬೀಡು ಆಗಿದೆ. ಈ ಪ್ರದೇಶದ ಎಲ್ಲ ಸೂಫಿಗಳ, ಸಂತರನ್ನು ಕಾಲಾನುಕ್ರಮವಾಗಿ ಅಧ್ಯಯನ ಮಾಡುವ ಈ ಕೃತಿಯು ಅವರ ಚಿಂತನೆಗಳು, ಆರೋಗ್ಯಕರ ಸಮಾಜ ನಿರ್ಮಾಣದ ಆಶಯಗಳು, ಅಧ್ಯಾತ್ಮ ಸಾಧನೆಯ ಎತ್ತರಗಳನ್ನು ಕಾಣಿಸುವ ಕೃತಿ ಇದು.  

About the Author

ಫಕೀರ್ ಮುಹಮ್ಮದ್ ಕಟ್ಪಾಡಿ
(25 June 1949)

ಕತೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನವರು. 1949 ಜೂನ್ 25ರಂದು ಜನಿಸಿದರು. ಬಿ.ಕಾಂ. ಪದವೀಧರರಾಗಿದ್ದ ಅವರು ಬ್ಯಾಂಕ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ’ಗೋರಿ ಕಟ್ಟಿಕೊಂಡವರು’, ’ನೋಂಬು’, ’ದಜ್ಜಾಲ’, ’ಅತ್ತರ್ ಹಾಜಿಕ್ ಮತ್ತು ಇತರ ಕತೆಗಳು’, ’ಪಚ್ಚ ಕುದುರೆ’ ಕತಾಸಂಕಲನಗಳು. ನೀಳ್ಗತೆಗಳ ಸಂಕಲನ ’ಕಡವು ಮನೆ’ ಹಾಗೂ ’ಸರಕುಗಳು’ ಮತ್ತು ’ಕಚ್ಚಾದ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ’ಬೇರೂತಿನಿಂದ ಜರುಸಲೇಮಿಗೆ (2010) ಮತ್ತು ಮಂಟೋ ಬರೆದ ದೇಶ ವಿಭಜನೆಯ ಕತೆಗಳು’ ಅನುವಾದ ಕೃತಿಗಳು. ’ಕಯ್ಯೂರಿನ ರೈತವೀರರು’, ’ರಾಷ್ಟ್ರೀಯತೆ ಮತ್ತು ಮುಸ್ಲಿಮರು’, ’ಸೂಫಿ ಸಂತರು’ ...

READ MORE

Related Books