ವಿಶ್ವ ವಾಣಿಜ್ಯ ಸಂಸ್ಥೆ:ಸಂಕಟದ ಸುಳಿಯಲ್ಲಿ ಭಾರತೀಯ ರೈತ

Author : ಜೆ.ಬಾಲಕೃಷ್ಣ

Pages 32

₹ 13.00




Published by: ಕನ್ನಡ ಅಧ್ಯಾಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ ಬೆಂಗಳೂರು

Synopsys

ಒಕ್ಕೂಟವ್ಯವಸ್ಥೆಯಲ್ಲಿ ನಾವು ಏಕಾಂಗಿಯಾಗಿ ಬದುಕಲಾರೆವಾದ್ದರಿಂದ ಜಾಗತಿಕ ವ್ಯಾಪಾರ ಸಂಬಂಧಗಳು ನಮಗೆ ಅನಿವಾರ್ಯ. ಆದರೆ ಅದರ ಪರಿಣಾಮವಾಗಿ ಬಹುಪಾಲು ಸಣ್ಣ ಮತ್ತು ಅತಿಸಣ್ಣ ರೈತರನ್ನು ಹೊಂದಿರುವ ಭಾರತೀಯ ಕೃಷಿರಂಗ ಈಗತಾನೆ ಜೀವನಧಾರ ಕೃಷಿಯಿಂದ ವಾಣಿಜ್ಯ ಕೃಷಿಗೆ ಪ್ರವೇಶಿಸುತ್ತಿದೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ಬೆಲೆಯಲ್ಲಿ ಸ್ಪರ್ಧಾತ್ಮಕವಾಗಿರುವಂತಹ ಕೃಷಿ ಉತ್ಪನ್ನಗಳನ್ನು ಭಾರತೀಯ ರೈತರಿಂದ ನಿರೀಕ್ಷಿಸಲಾಗುತ್ತಿದೆ.

ಆದರೆ ಸಮರ್ಪಕ ಸಂರಕ್ಷಣೆಯ ಅಂಶಗಳಿಲ್ಲದೆ ಕೈಗಾರಿಕಾ ರಾಷ್ಟ್ರಗಳ ಸ್ಥಾಪಿತ ವಾಣಿಜ್ಯಕೃಷಿಯ ಎದುರು ಭಾರತ ಸ್ಪರ್ಧಿಸಲು ಸಾಧ್ಯವೆ? ಈ ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಆತನಿಗೆ ಸಮಾನ ಸ್ಥಾನ ದೊರೆಯುವುದೇ ಎಂಬ ಅಂಶಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books