ಪತ್ರಕರ್ತ, ಲೇಖಕ ರವಿ ಬೆಳಗೆರೆ ಅವರು ಸ್ಥಾಪಿಸಿದ ಪ್ರಕಟಣಾ ಸಂಸ್ಥೆ ಭಾವನಾ ಪ್ರಕಾಶನ. ಈಗ ಅವರ ಪುತ್ರಿ ಭಾವನಾ ಬೆಳಗೆರೆ ಮುನ್ನಡೆಸುತ್ತಿದ್ದಾರೆ. ಈವರೆಗೆ 100ಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿರುವ ಸಂಸ್ಥೆ ಇದು.
ರವಿ ಬೆಳಗೆರೆಯವರ ಕೃತಿಗಳಾದ ಹೇಳಿಹೋಗು ಕಾರಣ, ನಿ ಹೀಂಗ ನೋಡಬ್ಯಾಡ ನನ್ನ, ಮಾಂಡೋವಿ, ಇಂದಿರೆಯ ಮಗ ಸಂಜಯ ಮೊದಲಾದ ಕೃತಿಗಳು ಓದುಗ ವಲಯದಲ್ಲಿ ಬಹಳ ಮನ್ನಣೆ ಗಳಿಸಿದವುಗಳು. ಹೇಳಿಹೋಗು ಕಾರಣ ಕೃತಿ ಇವತ್ತಿಗೂ ಬೇಡಿಕೆಯುಳ್ಳ ಕೃತಿ. ನೀ ಹೀಂಗ ನೋಡಬ್ಯಾಡ ನನ್ನ ಸೇರಿದಂತೆ ಹಲವು ಕೃತಿಗಳಿಗೆ ಪ್ರಶಸ್ತಿಗಳು ಬಂದಿವೆ.
ರವಿ ಬೆಳಗೆರೆಯವರು ಅರ್ಧಕ್ಕೇ ನಿಲ್ಲಿಸಿರುವ ಕೃತಿಗಳನ್ನು ಪೂರ್ಣಗೊಳಿಸಿ ಮತ್ತೆ ಕೆಲವನ್ನು ಹಾಗೆಯೇ ಪ್ರಕಟಿಸುವ ನಿಟ್ಟಿನಲ್ಲಿ ಭಾವನಾ ಅವರು ಸಿದ್ಧತೆ ನಡೆಸಿದ್ದಾರೆ.
©2025 Book Brahma Private Limited.